ಉಡುಪಿ: ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಅನಗತ್ಯವಾಗಿ ತಿರುಗಾಡುವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.
ಮೊಬೈಲ್ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಮಹಿಳೆಗೆ, ಕಾರನ್ನು ಬದಿಗೆ ನಿಲ್ಲಿಸಿ ಮಾತನಾಡಿ ಎಂದು ಸೂಚಿಸಿದ್ದ ಟ್ರಾಫಿಕ್ ಎಸ್ಐ ಅಬ್ದುಲ್ ಖಾದರ್ಗೆ ಮಹಿಳೆ ಆವಾಜ್ ಹಾಕಿದ ಘಟನೆ ಉಡುಪಿ ಕ್ಲಾಕ್ ಟವರ್ ಬಳಿ ನಡೆದಿದೆ.
ಪೊಲೀಸರಿಗೇ ಆವಾಜ್ ಹಾಕಿದ ಮಹಿಳೆ ಮಾಡಿದ ತಪ್ಪಿಗೆ ದಂಡ ಕಟ್ಟಲು ಸೂಚಿಸಿದ ಟ್ರಾಫಿಕ್ ಎಸ್ಐಗೆ ಮಹಿಳೆ ಅವಾಜ್ ಹಾಕಿದ್ದಾಳೆ. ಬುದ್ಧಿ ಹೇಳಿ ದಂಡ ಕಟ್ಟಿ ಅಂದಿದ್ದಕ್ಕೆ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ ಎಂದು ಮಹಿಳೆ ರಸ್ತೆಯಲ್ಲೇ ಗಲಾಟೆ ಮಾಡಿದ್ದಾಳೆ.
ಕೊನೆಗೂ ಮಹಿಳೆಗೆ ಫೈನ್ ಹಾಕಿ ಎಚ್ಚರಿಕೆ ನೀಡಿ ಕಳುಹಿಸಿದರೂ ಮಹಿಳೆ ಮಾತ್ರ ತನ್ನ ಭಂಡತನ ತೋರಿಸೋ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.