ಕರ್ನಾಟಕ

karnataka

ETV Bharat / state

ಬ್ರಹ್ಮಾವರದ ಅಪಾರ್ಟ್​​ಮೆಂಟ್​​ನಲ್ಲಿ ಮಹಿಳೆಯ ಬರ್ಬರ ಕೊಲೆ..! - udupi woman murder,

ಬ್ರಹ್ಮಾವರದ ಅಪಾರ್ಟ್​​ಮೆಂಟ್​​ ಒಂದರಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದ್ದು, ಚಿನ್ನ ಮತ್ತು ಹಣವನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ.

vishala ganiga murder case
ವಿಶಾಲ ಗಾಣಿಗ ಕೊಲೆ ಪ್ರಕರಣ

By

Published : Jul 13, 2021, 7:46 AM IST

Updated : Jul 13, 2021, 8:50 AM IST

ಉಡುಪಿ: ಜಿಲ್ಲೆಯ ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಅಪಾರ್ಟ್​​ಮೆಂಟ್​​ವೊಂದರಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ. ಗಂಗೊಳ್ಳಿ ಮೂಲದ ವಿಶಾಲ ಗಾಣಿಗ(35) ಕೊಲೆಗೀಡಾಗಿರುವ ಮಹಿಳೆ.

ಮಹಿಳೆಯ ಕುತ್ತಿಗೆಗೆ ವಯರ್ ಬಿಗಿದು ದಿಂಬಿನಿಂದ ಒತ್ತಿ ಕೊಲೆ ಮಾಡಿ ರೀತಿ ಕಾಣುತ್ತಿದೆ. ಅಲ್ಲದೇ ಕೊಲೆಗೈದು ಚಿನ್ನ ಮತ್ತು ಹಣವನ್ನು ಕಳವು ಮಾಡಿದ ಶಂಕೆ ಕೂಡ ವ್ಯಕ್ತವಾಗಿದೆ.

ಬ್ರಹ್ಮಾವರದ ಅಪಾರ್ಟ್​​ಮೆಂಟ್​​ನಲ್ಲಿ ಮಹಿಳೆಯ ಬರ್ಬರ ಕೊಲೆ..!

ಕೊಲೆಯಾದ ಮಹಿಳೆ ಕೆಲವು ದಿನಗಳ ಹಿಂದೆಯಷ್ಟೇ ವಿದೇಶದಿಂದ ಆಗಮಿಸಿದ್ದರು. ನಿನ್ನೆ ಗಂಗೊಳ್ಳಿಯ ಮನೆಗೆ ಹೋಗುವವರಿದ್ದರು. ದಾರಿ ಮಧ್ಯೆ ಬ್ಯಾಂಕ್​​ನ ಕೆಲಸ ಇರುವ ಕಾರಣ ಅದನ್ನು ಮುಗಿಸಿ ಗಂಗೊಳ್ಳಿ ಮನೆಗೆ ಬರುವೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ, ಸಂಜೆಯಾದರೂ ಮನೆಗೆ ಬಾರದ ಕಾರಣ ಮಗಳನ್ನು ಹುಡುಕಿಕೊಂಡು ತಂದೆ ಬ್ರಹ್ಮಾವರಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಮುದ್ದೇಬಿಹಾಳ ಶಾಸಕ‌ ಎ.ಎಸ್. ಪಾಟೀಲ್ ಸಂಬಂಧಿಕರಿದ್ದ ಕಾರು ಪಲ್ಟಿ

ಬ್ಯಾಂಕ್ ಕೆಲಸ ಮುಗಿಸಿ ಅಪಾರ್ಟ್​​ಮೆಂಟ್​ಗೆ ಹಿಂತಿರುಗಿದಾಗ ಘಟನೆ ನಡೆದಿದೆ ಎನ್ನಲಾಗಿದ್ದು, ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Jul 13, 2021, 8:50 AM IST

ABOUT THE AUTHOR

...view details