ಕರ್ನಾಟಕ

karnataka

ETV Bharat / state

ದನದ ಕೊಟ್ಟಿಗೆ ಗೋಡೆ ಕುಸಿದು ಮಹಿಳೆ ಸಾವು - Woman dies after collapsing crib wall

ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ವೇಳೆ ಮಣ್ಣಿನ ಗೋಡೆ ಕುಸಿದುಬಿದ್ದು, ಮಹಿಳೆವೋರ್ವಳು ಸಾವನ್ನಪ್ಪಿದ್ದಾರೆ. ಉಡುಪಿಯ ಚೇರ್ಕಾಡಿ ಗ್ರಾಮದ ಬೆನಗಲ್ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕೊಟ್ಟಿಗೆ ಗೋಡೆ ಕುಸಿದು ಮಹಿಳೆ ಸಾವು

By

Published : Aug 8, 2019, 11:33 PM IST

ಉಡುಪಿ:ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ವೇಳೆ ಮಣ್ಣಿನ ಗೋಡೆ ಕುಸಿದುಬಿದ್ದು, ಮಹಿಳೆ ಮೃತಪಟ್ಟಿರುವ ಘಟನೆ ಚೇರ್ಕಾಡಿ ಗ್ರಾಮದ ಬೆನಗಲ್ ಎಂಬಲ್ಲಿ ನಡೆದಿದೆ.

ಕೊಟ್ಟಿಗೆ ಗೋಡೆ ಕುಸಿದು ಮಹಿಳೆ ಸಾವು

ಕೊರಗ ಮರಕಾಲ ಎಂಬುವರ ಪತ್ನಿ ಗಂಗಾಮರಕಾಲ್ತಿ (52) ಮೃತ ಮಹಿಳೆ. ನಿರಂತರ ಮಳೆಯಿಂದ ನೆಂದಿದ್ದ ಗೋಡೆ ಕುಸಿದಿದೆ. ಹಸುವಿನ ಹಾಲು ಕರೆಯುತ್ತಿದ್ದ ಗಂಗಾ ಅವರು ಗೋಡೆಯ ಅವಶೇಷಗಳಡಿ ಸಿಲುಕಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಪೇತ್ರಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು.

ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಸ್​.ಪಿ. ನಿಶಾ ಜೇಮ್ಸ್, ಜಿಲ್ಲಾ ಪಂಚಾಯತ್ ಸಿಇಒ ಸಿಂಧೂ ರೂಪೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೌರಯ್ಯ ಹಾಗೂ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಘಟನೆ ವಿವರ ಪಡೆದ ಜಿಲ್ಲಾಧಿಕಾರಿಗಳು ಮೃತರ ಕುಟುಂಬಕ್ಕೆ ಶೀಘ್ರ ಪರಿಹಾರ ಕೊಡಿಸುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details