ಕರ್ನಾಟಕ

karnataka

ETV Bharat / state

ಉಡುಪಿಯ ನೀರೆಬೈಲೂರಿನಲ್ಲಿ ಕಾಡುಪಾಪ ಕಳೇಬರ ಪತ್ತೆ - wild animal

ಉಡುಪಿ ಜಿಲ್ಲೆಯಲ್ಲಿ ನೀರೆಬೈಲೂರಿನ ರಸ್ತೆಯಲ್ಲಿ ಕಾಡುಪಾಪ ಕಳೇಬರ ಪತ್ತೆಯಾಗಿದೆ.

Wild animal death in Udupi
ಉಡುಪಿಯ ನೀರೆಬೈಲೂರಿನಲ್ಲಿ ಕಾಡುಪಾಪ ಮೃತ ದೇಹ ಪತ್ತೆ

By

Published : Feb 7, 2021, 4:53 PM IST

ಉಡುಪಿ: ಕಾರ್ಕಳ ತಾಲೂಕು ನೀರೆಬೈಲೂರುನಲ್ಲಿ ಕಾಡುಪಾಪ ಸತ್ತು ಬಿದ್ದಿದೆ. ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.

ರಾತ್ರಿ ವೇಳೆ ಕಾಡುಪಾಪಗಳು ಹೆಚ್ಚಾಗಿ ಸಂಚರಿಸುತ್ತವೆ. ಕಾರ್ಕಳ, ಹೆಬ್ರಿ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾಡುಪಾಪಗಳು ನಿರುಪದ್ರವಿಗಳು. ಬೆಳಗಿನ ಜಾವ ಕಾಡುಪಾಪ ಕಳೇಬರ ಕಾಣಿಸಿಕೊಂಡಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ವಲಯ ಅರಣ್ಯಾಧಿಕಾರಿಗಳು ಕಾಡುಪಾಪದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.

For All Latest Updates

ABOUT THE AUTHOR

...view details