ಉಡುಪಿ:ಯಾರಿಂದಲೂ ಎನ್ಆರ್ಸಿ ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪೊಲೀಸರು ಮಂಗಳೂರು ಗಲಭೆ ವಿಡಿಯೋ ಯಾಕೆ ರಿಲೀಸ್ ಮಾಡಿದ್ರು: ದಿನೇಶ್ ಗುಂಡೂರಾವ್ ಪ್ರಶ್ನೆ - Mangalore riot
ಮಂಗಳೂರು ಗಲಭೆಯ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿ ಮಾಧ್ಯಮಗಳಿಗೆ ಯಾಕೆ ಕೊಟ್ಟಿದ್ದು? ಸಿಐಡಿ ತನಿಖೆಗೆ ಕೊಟ್ಟ ಮೇಲೆ ವಿಡಿಯೋ ತನಿಖೆಗೆ ನೀಡಬೇಕಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದೇಶವನ್ನು ಒಡಿಯುವ ಕೆಲಸ ಮಾಡಬೇಡಿ. ನಿಮ್ಮ ಪ್ರತಿಷ್ಠೆ, ಸರ್ವಾಧಿಕಾರಿ ಧೋರಣೆ ಬಿಟ್ಟು CAA ಬಗ್ಗೆ ಎಲ್ಲರನ್ನೂ ಚರ್ಚೆಗೆ ಕರಿಬೇಕು. ಸಂವಿಧಾನ ವಿರೋಧಿ ಅಂಶ ಇದರಲ್ಲಿದ್ದು, ಮೂಲ ಸಿದ್ಧಾಂತಕ್ಕೆ ಧಕ್ಕೆ ತರುವ ಕಾನೂನಿದು. ಅನವಶ್ಯಕವಾಗಿ ಗಲಾಟೆ ಸೃಷ್ಟಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿ ನಾಯಕರು ಮಾತನಾಡುತ್ತಾರೆ. ಸಿ.ಟಿ.ರವಿ, ಪ್ರತಾಪ್ ಸಿಂಹ, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ, ತೇಜಸ್ವಿ ಒಂದೇ ಕೆಟಗರಿ. ಪ್ರತಾಪ್ ಸಿಂಹ ಎಲ್ಲಿಂದಲೋ ಬಂದು ಅಪ್ಪಿತಪ್ಪಿ ಎಂಪಿ ಆಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಗೋಲಿಬಾರ್ನಲ್ಲಿ ಅಮಾಯಕರು ಸತ್ತು ಹೋಗಿದ್ದು ಸರ್ಕಾರದ ವೈಫಲ್ಯ ಎದ್ದು ಕಾಣುತ್ತೆ. ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಯಾಕೆ ಮಾಡಿದ್ರು ಅಂತಾ ದಿನೇಶ್ ಗುಂಡುರಾವ್ ಪ್ರಶ್ನಿಸಿದ್ದಾರೆ.ಇದರ ಬಗ್ಗೆ ಹಾಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆಯಾಗಬೇಕು. ಸಿಐಡಿ, ಮ್ಯಾಜಿಸ್ಟ್ರೇಟ್ ತನಿಖೆ ಬಗ್ಗೆ ವಿಶ್ವಾಸವಿಲ್ಲ ಎಂದು ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.