ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಎಮರ್ಜೆನ್ಸಿ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆಯುತ್ತಿದ್ದ ಸೋಮವಾರ ಸಂತೆಯನ್ನು ಬಂದ್ ಮಾಡಲಾಗಿದೆ.
ಕೋವಿಡ್-19 ಕಟ್ಟೆಚ್ಚರ: ಬ್ರಹ್ಮಾವರ ಸಂತೆಗೆ ಬ್ರೇಕ್ ಹಾಕಿದ ತಹಶೀಲ್ದಾರ್ - ಬ್ರಹ್ಮಾವರ ಸಂತೆ
ಜಿಲ್ಲೆಯಲ್ಲಿ ಕೊರೊನಾ ಎಮರ್ಜೆನ್ಸಿ 144 ಸೆಕ್ಷನ್ ಹಿನ್ನಲೆಯಲ್ಲಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆಯುತ್ತಿದ್ದ ಸೋಮವಾರದ ಸಂತೆಯನ್ನು ಬಂದ್ ಮಾಡಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ ಸಂತೆ ಬಂದ್ ಮಾಡಿಸಿದ ತಹಶೀಲ್ದಾರ್
ಬೆಳಗ್ಗೆ ಸಂತೆ ಮಾರುಕಟ್ಟೆಗೆ ಆಗಮಿಸಿದ್ದ ವ್ಯಾಪಾರಸ್ಥರನ್ನು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಜಿ. ಗೊರಯ್ಯ ಅವರು ಸಿಬ್ಬಂದಿ ಸಮೇತ ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸುವ ಮೂಲಕ ಸಂತೆಯನ್ನು ತೆರವು ಮಾಡಿಸಿದ್ದಾರೆ. ಈ ದಿನ ಸಂತೆ ವ್ಯಾಪಾರಕ್ಕೆ ಅವಕಾಶವಿಲ್ಲವೆಂದು ಮನವರಿಕೆ ಮಾಡಿಸಿ ಸಂತೆಗೆ ಬಂದವರನ್ನು ವಾಪಸ್ ಕಳುಹಿಸಿದ್ದಾರೆ.