ಕರ್ನಾಟಕ

karnataka

ETV Bharat / state

ಅವ್ರರವ್ರ ರಕ್ಷಣೆ ಅವ್ರು ಮಾಡ್ಕೊಳ್ಳಲು ಎಲ್ರೂ ಸ್ವತಂತ್ರರು.. ನಾವ್‌ ಮಾತ್ನಾಡಬಾರ್ದು, ನಮ್‌ ಕೆಲ್ಸಾ ಮಾತ್ನಾಡ್ಬೇಕು : ಸಿಎಂ

ಕೆಲವೊಂದು ಕಾನೂನುಗಳನ್ನು ಹಿಂದಿನ ಸರ್ಕಾರದವರೇ ಜಾರಿ ಮಾಡಿದ್ದಾರೆ. ನಾವೇನು ಹೊಸ ಕಾನೂನುಗಳನ್ನು ಮಾಡಿಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡುತ್ತಿದ್ದೇವೆ.ನಾವು ಮಾತನಾಡುವುದಿಲ್ಲ, ನಮ್ಮ ಆ್ಯಕ್ಷನ್ ಮಾತನಾಡುತ್ತದೆ. ನಮಗೆ ಪ್ರತಿಪಕ್ಷಗಳಿಂದ ಕಲಿಯಬೇಕಾದ್ದು ಏನೂ ಇಲ್ಲ. ಯಾವ ಸಂದರ್ಭದಲ್ಲಿ ಏನು ನಿರ್ಧಾರ, ಏನು ಕ್ರಮಕೈಗೊಳ್ಳಬೇಕು ನಮ್ಗೆ ಗೊತ್ತಿದೆ ಎಂದು ಸಿಎಂ ಹೇಳಿದ್ದಾರೆ..

CM
ಸಿಎಂ

By

Published : Apr 11, 2022, 4:06 PM IST

ಉಡುಪಿ :ಅವರವರ ರಕ್ಷಣೆ ಅವರೇ ಮಾಡಿಕೊಳ್ಳಲು ಎಲ್ಲರೂ ಸ್ವತಂತ್ರರು. ಇದರ ಬಗ್ಗೆ ತಪ್ಪು ವಿಶ್ಲೇಷಣೆ ಸರಿಯಲ್ಲ. ಸರ್ಕಾರ ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದೆ. ಕೆಲ ಕಾನೂನುಗಳನ್ನು ಹಿಂದಿನ ಸರ್ಕಾರದವರೇ ಜಾರಿ ಮಾಡಿದ್ದಾರೆ. ನಾವೇನು ಹೊಸ ಕಾನೂನುಗಳನ್ನು ಮಾಡಿಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡುತ್ತಿದ್ದೇವೆ ಎಂದು ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿರುವುದು..

ಮಂಗಳೂರಿನಲ್ಲಿ ಲವ್ ಜಿಹಾದ್ ವಿರುದ್ಧ ಟಾಸ್ಕ್​​ ಫೋರ್ಸ್ ರಚನೆ ವಿಚಾರವಾಗಿ ಮಾಧ್ಯಮದೊಂದಿಗೆ ಅವರು ಮಾತಾಡಿದರು. ಇನ್ನೂ ಸಿಎಂ ಬೊಮ್ಮಾಯಿ ನಾಲಿಗೆ ಕಳೆದುಕೊಂಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕಾಲದಲ್ಲಿ ಹತ್ತು ಹಲವು ಕೊಲೆಗಳು ಆದವು.

ಹಿಂದೂ ಕಾರ್ಯಕರ್ತರ ಕೊಲೆ ಆಯ್ತು. ಕೊಲೆ ಮಾಡಿದವರ ಕೇಸನ್ನೇ ವಿತ್​​​ಡ್ರಾ ಮಾಡಿಕೊಂಡಿದ್ದಾರೆ. ಆಗ ಸಿದ್ದರಾಮಯ್ಯ ಬುದ್ಧಿ ಕಳೆದುಕೊಂಡಿದ್ರಾ? ಪ್ರಸಕ್ತ ವಿದ್ಯಮಾನಗಳ ಬಗ್ಗೆ ಯಾರು ಏನೇ ವಿಶ್ಲೇಷಣೆ ಮಾಡಲಿ. ನಾವು ಸಂವಿಧಾನಬದ್ಧವಾಗಿ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುತ್ತೇವೆ. ಕಾನೂನಿನ ಮುಂದೆ ಎಲ್ಲರೂ ಸಮಾನ. ಈ ದೃಷ್ಟಿಕೋನ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ:ವಿಧಾನಸಭೆ ಚುನಾವಣೆಗೆ ಬಿಜೆಪಿ ತಾಲೀಮು.. ರಾಜ್ಯದ ರೌಂಡ್ಸ್‌ಗೆ ಕಟೀಲ್-ಅರುಣ್‌ಸಿಂಗ್-ಸಿಎಂ ನೇತೃತ್ವದಲ್ಲಿ 3 ತಂಡ ರೆಡಿ..

ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶ ಇದೆ. ಕೋರ್ಟ್ ಆದೇಶ ಪಾಲನೆ ಆಗುತ್ತೆ. ನಾವು ಮಾತನಾಡುವುದಿಲ್ಲ, ನಮ್ಮ ಆ್ಯಕ್ಷನ್ ಮಾತನಾಡುತ್ತದೆ. ನಮಗೆ ಪ್ರತಿಪಕ್ಷಗಳಿಂದ ಕಲಿಯಬೇಕಾದ್ದು ಏನೂ ಇಲ್ಲ, ಯಾವ ಸಂದರ್ಭದಲ್ಲಿ ಏನು ನಿರ್ಧಾರ, ಏನು ಕ್ರಮಕೈಗೊಳ್ಳಬೇಕು ನಮಗೆ ಗೊತ್ತಿದೆ. ಹಲವಾರು ಕೊಲೆಗಳಿಗೆ ಸಂಬಂಧಿಸಿದ ಕೇಸ್​​ಗಳನ್ನು ವಿತ್​ಡ್ರಾ ಮಾಡಿದರು. ಆರೋಪವಿರುವ ಸಂಸ್ಥೆಗಳನ್ನು ಜನಗಳನ್ನು ನೇರವಾಗಿ ಸರ್ಕಾರದ ಮಟ್ಟದಲ್ಲಿ ಕೈಬಿಟ್ಟಿದ್ದಾರೆ ಎಂದು ಹೇಳುವ ಮೂಳಕ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ರು.

For All Latest Updates

ABOUT THE AUTHOR

...view details