ಉಡುಪಿ:ಹಂಪಿಯ ಚಕ್ರತೀರ್ಥದಲ್ಲಿರುವ ಶ್ರೀ ವ್ಯಾಸರಾಜ ತೀರ್ಥರ ವೃಂದಾವನ ಧ್ವಂಸವಾಗಿದ್ದು, ಇದಕ್ಕೆ ಉಡುಪಿಯ ಮಠಾಧೀಶರುಗಳು ಖಂಡಿಸಿದ್ದಾರೆ.
ಉಡುಪಿ ಮಠದ ಹಿರಿಯ ಯತಿಗಳಾದ ಪೇಜಾವರ ಮಠದ ವಿಶ್ವೇಶ ತೀರ್ಥರು ಮಾತನಾಡಿ, ವ್ಯಾಸರಾಜರ ವೃಂದಾವನದ ಮೇಲಾಗಿರುವ ಈ ಧಕ್ಕೆ ಸಿಂಧೂ ಸಮಾಜಕ್ಕೆ ಮಾತ್ರವಲ್ಲ ಇಡೀ ಕರ್ನಾಟಕ ರಾಜ್ಯಕ್ಕೆ ಆಘಾತದ ಸಂಗತಿಯಾಗಿದೆ. ಈ ಕೃತ್ಯ ಹಿಂದೂ ಸಮಾಜಕ್ಕೆ ಮಾಡಿರುವ ಅಪಮಾನವಾಗಿದ್ದು, ಇದನ್ನು ನಾವು ಖಂಡಿಸತ್ತೇವೆ ಎಂದರು.
ವ್ಯಾಸರಾಜ ತೀರ್ಥರ ವೃಂದಾವನ ಧ್ವಂಸ ವಿಚಾರ: ಉಡುಪಿ ಮಠಾಧೀಶರಿಂದ ಖಂಡನೆ ಈ ಕುರಿತು ಸರಿಯಾದ ತನಿಖೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದು, ಈ ವಿಚಾರವಾಗಿ ಮಾಧ್ವ ಪರಂಪರೆಯ ಎಲ್ಲಾ ಯತಿಗಳು ತುರ್ತಾಗಿ ಸಭೆ ಸೇರಿ ಮುಂದಿನ ತೀರ್ಮಾನ ಕೈಗೊಳ್ಳೋದಾಗಿ ತಿಳಿಸಿದ್ದಾರೆ.
ಕೃತ್ಯ ಖಂಡಿಸಿದ ವಿದ್ಯಾಧೀಶ ತೀರ್ಥ ಸ್ವಾಮೀಜಿ :
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮ ಸಮಾಜ ದೊಡ್ಡ ಸಂಪತ್ತು. ಕರ್ನಾಟಕ ಸಿಂಹಾಸನವನ್ನು ರಕ್ಷಿಸಿದವರು. ಲೌಖಿಕ ಹಾಗೂ ಅಲೌಖಿಕ ತಪಸ್ಸುನ್ನು ಧಾರೆ ಎರೆದು ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಂತಹ ವ್ಯಾಸರಾಜ ತೀರ್ಥರ ವೃಂದಾವನಕ್ಕೆ ನಡೆದಿರುವ ಆಘಾತ ಇಡೀ ದೇಶಕ್ಕೆ ಒಂದು ರೀತಿಯ ಸವಾಲಾಗಿದೆ. ಇದರ ಮೂಲ ಪತ್ತೆ ಜೊತೆಗೆ ಅದರ ಪುನರ್ ನಿರ್ಮಾಣದಲ್ಲಿ ಎಲ್ಲೂರು ನಿಗಾ ವಹಿಸಬೇಕು. ಈ ಮೂಲಕ ಸಮಾಜ ಒಟ್ಟುಗೂಡಲು ಇದು ನಾಂದಿಯಾಗಬೇಕು ಎಂದರು.
ಅಲ್ಲದೇ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಕೂಡ ಈ ಕೃತ್ಯವನ್ನು ಖಂಡಿಸಿದ್ದಾರೆ.