ಉಡುಪಿ: ರಸ್ತೆ ನಿಯಮ ಪಾಲನೆ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಆಟೋರಿಕ್ಷಾ ಚಾಲಕರೊಬ್ಬರು ಹಾಗೂ ಪೊಲೀಸರ ನಡುವೆ ನಡೆದ ಮಾತಿನ ಸಮರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಉಡುಪಿ ನಗರದ ಕಲ್ಸಂಕದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮಾಸ್ಕ್ ಹಾಕದೇ ರಿಕ್ಷಾ ಚಲಾಯಿಸಿಕೊಂಡು ಬಂದ ಹಿರಿಯ ಚಾಲಕರೊಬ್ಬರನ್ನು ಪೊಲೀಸರು ತಡೆದು ನಿಲ್ಲಿಸಿ, ಮಾಸ್ಕ್ ಯಾಕೆ ಹಾಕಿಲ್ಲ, ದಾಖಲೆಗಳು ಎಲ್ಲಿ ಅಂತ ಕೇಳಿದ್ರು. ರಿಕ್ಷಾ ಚಾಲಕನ ಬಳಿ ಯಾವುದು ದಾಖಲೆ ಇಲ್ಲದಿರುವುದು ಗೊತ್ತಾದಾಗ ಪೊಲೀಸರು ರಿಕ್ಷಾವನ್ನು ಇಲ್ಲೇ ಬಿಡಿ ಎಂದು ಹೇಳಿದ್ದಾರೆ.