ಉಡುಪಿ:ಸರ್ಜಿಕಲ್ ಸ್ಟ್ರೈಕ್ ಕುರಿತಾದ 'ಉರಿ' ಸಿನಿಮಾವನ್ನು ಮಣಿಪಾಲದ ಥಿಯೇಟರ್ ಒಂದರಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲಾಯಿತು.
ಮಣಿಪಾಲದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ 'ಉರಿ' ಸಿನಿಮಾ ಪ್ರದರ್ಶನ - ಶಾಲಾ ವಿದ್ಯಾರ್ಥಿ
ಶಾಲಾ ವಿದ್ಯಾರ್ಥಿಗಳಿಗೆ ದೇಶ ಪ್ರೇಮದ ಬಗ್ಗೆ ಅರಿವು ಮೂಡಿಸಲು ಮಲ್ಪೆಯ ವಂದೇಮಾತರಂ ಸಂಘಟನೆ ವತಿಯಿಂದ ಮಣಿಪಾಲದ ಥಿಯೇಟರ್ ಒಂದರಲ್ಲಿ ಸರ್ಜಿಕಲ್ ಸ್ಟ್ರೈಕ್ ಕುರಿತಾದ 'ಉರಿ' ಸಿನಿಮಾವನ್ನು ಪ್ರದರ್ಶಿಸಲಾಯಿತು.

ಉರಿ ಸಿನಿಮಾವನ್ನು ಪ್ರದರ್ಶನ
ಮಲ್ಪೆ ಶಾಲಾ ವಿದ್ಯಾರ್ಥಿಗಳಿಗೆ ದೇಶ ಪ್ರೇಮದ ಬಗ್ಗೆ ಅರಿವು ಮೂಡಿಸಲು ಮಲ್ಪೆಯ ವಂದೇಮಾತರಂ ಸಂಘಟನೆ ಈ ಕಾರ್ಯವನ್ನು ಕೈಗೊಂಡಿತ್ತು. ವಿದ್ಯಾರ್ಥಿಗಳೊಂದಿಗೆ ಹಿರಿಯ ಮಾಜಿ ಸೈನಿಕರು, ಶಿಕ್ಷಕರು ಸಿನಿಮಾ ವೀಕ್ಷಿಸಿದರು.
ಉರಿ ಸಿನಿಮಾವನ್ನು ಪ್ರದರ್ಶನ
ಹಿರಿಯ ನಿವೃತ್ತ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ನಂತರ ತಮ್ಮ ಸೈನಿಕ ಜೀವನದ ಕಥೆಯನ್ನು ವಿದ್ಯಾರ್ಥಿಗಳ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು.