ಕಾರ್ಕಳ : ನಗರದಲ್ಲಿ13 ಕೋಟಿ ರೂ.ಗಳಒಳಚರಂಡಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಒಳಚರಂಡಿಯ ನೀರು ನಗರದ ಹತ್ತಕ್ಕೂ ಅಧಿಕ ಕುಡಿಯುವ ನೀರಿನ ಬಾವಿಗಳಿಗೆ ಸೇರಿ ಕಲುಷಿತಗೊಂಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನ ಬಳಸದೇ ಸಾಂಪ್ರದಾಯಿಕ ಶೈಲಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬುದು ಸ್ಥಳೀಯರ ಗಂಭೀರ ಅರೋಪ. ಅಲ್ಲದೇ ಹಳೆ ಚರಂಡಿ ಪೈಪ್ ಗಳನ್ನು ಬೇಕಾಬಿಟ್ಟಿ ಒಡೆದು ಹಾಕಲಾಗಿದೆ. ಮತ್ತೊಂದೆಡೆ ನೀರಿನ ಮಟ್ಟ ಕಾಪಾಡದೇ ಪೈಪ್ಗಳನ್ನು ಅಳವಡಿಕೆ ಮಾಡಿದ ಪರಿಣಾಮ ಒಳಚರಂಡಿಯ ನೀರು ಎಲ್ಲೆಂದರಲ್ಲಿ ಹರಿದು ನಗರದ ಹತ್ತಕ್ಕೂ ಹೆಚ್ಚು ಬಾವಿಗಳಿಗೆ ಸೇರಿ, ನಗರದ ನಿವಾಸಿಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರ ಅಸಡ್ಡೆ ಹಾಗೂ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವ್ಯವಸ್ಥೆಗೆ ಕಾರಣ ಎಂದು ನಗರದ ಜನತೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.