ಉಡುಪಿ:ರಾಜ್ಯ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ನಲ್ಲಿ ಕಲಾವಿದರಿಗೆ ಧನಸಹಾಯ ಘೋಷಿಸಿದೆ. ಆದರೆ, ಫಲಾನುಭವಿಗಳ ವಯೋಮಿತಿ 35 ಆಗಿರಬೇಕೆಂದು ಷರತ್ತು ವಿಧಿಸಿರುವುದು ಸರಿಯಲ್ಲ ಎಂದು ಯಕ್ಷಗಾನ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರಾವಳಿ ಭಾಗದಲ್ಲಿ 15 ರ ಹರೆಯದಲ್ಲೇ ಯಕ್ಷಗಾನ ಮೇಳ ಸೇರುವ ಯುವ ಕಲಾವಿದರಿದ್ಧಾರೆ. ಉಡುಪಿ ಜಿಲ್ಲೆಯೊಂದರಲ್ಲೇ 10-20 ವರ್ಷಗಳಿಂದ ಮೇಳಗಳಲ್ಲಿ ಸೇವೆ ಸಲ್ಲಿಸುತ್ತಿರುವ 35 ವರ್ಷಕ್ಕಿಂತ ಕೆಳಗಿನ ವಯೋಮಿತಿಯ ಸುಮಾರು 200 ಮಂದಿ ಕಲಾವಿದರಿದ್ದಾರೆ. ಸರ್ಕಾರದ ಸಹಾಯಧನ ಪಡೆಯಲು ವಯೋಮಿತಿ ನಿಗದಿಪಡಿಸಿರುವುದರಿಂದ ಈ ಯುವ ಕಲಾವಿದರಿಗೆ ಅನ್ಯಾಯವಾಗುತ್ತಿದೆ ಎಂದು ಯಕ್ಷಗಾನ ಕಲಾವಿದರು ಹೇಳುತ್ತಿದ್ದಾರೆ.