ಉಡುಪಿ:ಇತ್ತೀಚಿನ ವರ್ಷಗಳಲ್ಲಿ ಚೀನಿ ಗೂಡು ದೀಪಗಳನ್ನು ಓವರ್ ಟೇಕ್ ಮಾಡಿ ಸಾಂಪ್ರದಾಯಿಕ ಗೂಡು ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೇ ಸಮಯವನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಯುವತಿಯರ ತಂಡ ಕಳೆದ ನಾಲ್ಕು ವರ್ಷಗಳಿಂದ ಸಾಂಪ್ರದಾಯಿಕ ಗೂಡು ದೀಪಗಳನ್ನು ತಯಾರಿಸುತ್ತಿದೆ.
ದೀಪಾವಳಿ ಹಬ್ಬದ ಮುಂಚಿತದ ನಾಲ್ಕು ತಿಂಗಳ ಮೊದಲೇ ಹೆಣ್ಣುಮಕ್ಕಳ ತಂಡ, ಬಿದಿರಿನ ಗೂಡು ದೀಪಗಳನ್ನು ತಯಾರಿಸಲು ಶುರು ಮಾಡುತ್ತಾರೆ. ಪ್ಲಾಸ್ಟಿಕ್ ರಹಿತವಾದ ಗೂಡು ದೀಪಗಳು ಅಪ್ಪಟ ಮಂಟಪ ಶೈಲಿ ಹೋಲುತ್ತವೆ. ಗೂಡು ದೀಪದ ಒಳಗೆ ಹಣತೆ ಅಥವಾ ಲೈಟ್ ಇಡುವುದಕ್ಕೂ ವ್ಯವಸ್ಥೆ ಮಾಡಿದ್ದಾರೆ. ಬಣ್ಣದ ಕಾಗದಗಳನ್ನು ಅಂಟಿಸಿ, ವಿಶೇಷವಾದ ಮೆರುಗನ್ನು ಅದಕ್ಕೆ ನೀಡುತ್ತಾರೆ.