ಉಡುಪಿ:ಸ್ಯಾಂಡಲ್ವುಡ್ ಸ್ಟಾರ್ ವಾರ್ ಹೆಸರಲ್ಲಿ ಅವರ ಅಭಿಮಾನಿಗಳು ಹೊಡೆದಾಡಿಕೊಳ್ಳೋದನ್ನು ಕೇಳಿದ್ದೇವೆ. ಆದರೆ ಇದೊಂಥರಾ ಡಿಫರೆಂಟ್ ಕೇಸ್, ಇಲ್ಲಿ ಒದೆ ತಿಂದವನು ನಟ ಸುದೀಪ್ ಅಭಿಮಾನಿ. ಹೀಗೆ ಸುದೀಪ್ ಅಭಿಮಾನಿಗೆ ಅವಧೂತ ವಿನಯ ಗುರೂಜಿಯ ಶಿಷ್ಯರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅವದೂತ ವಿನಯ್ ಗುರೂಜಿಯವರು ನಟ ಸುದೀಪ್ಗೆ ಅವಮಾನ ಮಾಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಕೊನೆಗೆ ತಾವು ಹೇಳಿದ್ದನ್ನು ಎಡಿಟ್ ಮಾಡಲಾಗಿದೆ ಎಂದು ಗುರೂಜಿ ಸ್ಪಷ್ಟೀಕರಣವನ್ನೂ ಕೊಟ್ಟಿದ್ದರು. ಹೀಗೆ ಹೈ ಲೆವಲ್ನಲ್ಲಿ ಈ ಪ್ರಕರಣ ರಾಜಿಯಾದರೂ, ತಳಮಟ್ಟದಲ್ಲಿ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಟ ಸುದೀಪ್ ಅಭಿಮಾನಿ ರತ್ನಾಕರ ಎಂಬವರ ಮೇಲೆ, ವಿನಯ ಗುರೂಜಿಯ ಶಿಷ್ಯರು ಎಂದು ಹೇಳಿಕೊಂಡು ಏಳೆಂಟು ಮಂದಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಾಯಾಳು ರತ್ನಾಕರ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.