ಉಡುಪಿ :ಅರಳು ಹುರಿದಂತೆ ಮಾತನಾಡುವ ಈ ಪುಟ್ಟ ಪೋರಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಕಾರ್ಕಳ ತಾಲೂಕಿನ ಕಲಂಬಾಡಿ ಪದವು ಸರ್ಕಾರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಮನಸ್ವಿ ಕುಲಾಲ್ ಮೌಲ್ಯ ಶಿಕ್ಷಣ ಕುರಿತು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊರೊನಾ ಲಾಕ್ಡೌನ್ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಕಾರ್ಕಳ ತಾಲೂಕಿ ಬಾಲಕಿಯ ಶಿಕ್ಷಣ ವ್ಯವಸ್ಥೆ ಬಗೆಗಿನ ಮಾತುಗಳು ನೆಟ್ಟಿಗರ ಮನಗೆದ್ದಿದೆ.
ಮಹರ್ಷಿ ಅರವಿಂದ್, ವಿವೇಕಾನಂದ, ರವೀಂದ್ರನಾಥ್ ಟಾಗೋರ್ ಪ್ರತಿಪಾದಿಸಿದ ಶಿಕ್ಷಣ ಪದ್ಧತಿ ಜಾರಿಯಾಗಬೇಕಿತ್ತು. ಆದರೆ, ಬ್ರಿಟಿಷರ ಮೆಕಾಲೆ ಶಿಕ್ಷಣ ಪದ್ಧತಿಯೇ ನಮ್ಮಲ್ಲಿ ಮಾನವೀಯ ಮೌಲ್ಯಗಳ ಸವಕಳಿಗೆ ಕಾರಣ ಎಂದು ಮನಸ್ವಿ ಪ್ರತಿಪಾದಿಸುತ್ತಾರೆ.
ವಿದ್ಯಾರ್ಥಿನಿ ಮನಸ್ವಿ ಕುಲಾಲ್ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯ ಶಿಕ್ಷಣವನ್ನು ಕಡ್ಡಾಯಗೊಳಿಸುವ ಕುರಿತಾಗಿ ಆಡಿರುವ ಮಾತುಗಳು ನೋಡುಗರನ್ನು ಮೂಕ ಮುಗ್ಧರನ್ನಾಗಿಸುವಂತಿದೆ.