ಕರ್ನಾಟಕ

karnataka

ETV Bharat / state

ಯೋಧರಿಗೆ ಮಾಸ್ಕ್​ ಹೊಲಿದು ಕೊಟ್ಟ ಉಡುಪಿಯ ಬಾಲಕಿ: ರಾಜನಾಥ್ ಸಿಂಗ್​ರಿಂದ ಕೃತಜ್ಞತೆ ಪತ್ರ

ಕೊರೊನಾ ಸಂಕಷ್ಟದ ಕಾಲದಲ್ಲೂ ಆ ಬಾಲಕಿಗೆ ಯೋಧರ ಬಗ್ಗೆ ಸಾಕಷ್ಟು ಕಾಳಜಿ. ಗಡಿ ಕಾಯುವ ವೀರರು ಮಹಾಮಾರಿಗೆ ತುತ್ತಾಗಬಾರದು ಎಂದು ಬಾಲಕಿ ಸ್ವತಃ 300 ಮಾಸ್ಕ್ ತಯಾರಿಸಿ, ರಕ್ಷಣಾ ಸಚಿವರಿಗೆ ಕಳುಹಿಸಿಕೊಟ್ಟಿದ್ದಳು. ಸದ್ಯ ಈ ಬಾಲಕಿಯ ದೇಶ ಪ್ರೇಮ ಕಂಡು ರಕ್ಷಣಾ ಸಚಿವರು ಅಭಿನಂದನಾ ಪತ್ರ ಬರೆದಿದ್ದಾರೆ.

ಯೋಧರಿಗೆ ಮಾಸ್ಕ್​ ಹೊಲಿದು ಕೊಟ್ಟ ಉಡುಪಿಯ ಬಾಲಕಿ
ಯೋಧರಿಗೆ ಮಾಸ್ಕ್​ ಹೊಲಿದು ಕೊಟ್ಟ ಉಡುಪಿಯ ಬಾಲಕಿ

By

Published : Sep 30, 2020, 8:00 PM IST

ಉಡುಪಿ:ಮಾಸ್ಕ್ ತಯಾರು ಮಾಡಿ ಯೋಧರಿಗೆ ಕಳುಸಿರುವ ಬಾಲಕಿಯ ಹೆಸರು ಇಶಿತಾ ಆಚಾರ್. ಉಡುಪಿಯ ಅಂಬಲಪಾಡಿಯ ಈಕೆ ಮಣಿಪಾಲದ ಮಾದವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್​​ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. ಜೊತೆಗೆ ಯೋಧರು ಅಂದರೆ ಪ್ರೀತಿ, ಕಾಳಜಿ ಜೊತೆಗೆ ಗೌರವ.

ದೇಶವೇ ಕೊರೊನಾದಿಂದ ತತ್ತರಿಸಿ ಲಾಕ್​​​​ಡೌನ್ ಕೂಡ ಆಗಿತ್ತು. ನಂತರ ಮಾಸ್ಕ್ ಬಳಕೆಯೂ ಕೂಡ ಕಡ್ಡಾಯವಾಯ್ತು. ಹೀಗಾಗಿ ಸ್ಕೌಟ್ಸ್ ಶಿಕ್ಷಕರು, SSLC ವಿದ್ಯಾರ್ಥಿಗಳಿಗಾಗಿ ಮಾಸ್ಕ್ ತಯಾರಿಸುವಂತೆ ಹೇಳಿದ್ದರು. ಮನೆಯಲ್ಲೇ ಮಾಡರ್ನ್ ಹೊಲಿಗೆ ಯಂತ್ರ ಇದ್ದ ಕಾರಣ ಇಶಿತಾ ಮಾಸ್ಕ್ ತಯಾರು ಮಾಡಿ 10ನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀಡಿದಳು. ಇದರಿಂದಲೇ ಸ್ಪೂರ್ತಿಗೊಂಡು ಮತ್ತಷ್ಟು ಮಾಸ್ಕ್ ತಯಾರಿಸಿದಳು. ಇದನ್ನು ಅರ್ಹರಿಗೆ ನೀಡಬೇಕು ಅಂತ ಯೋಚನೆ ಬಂದಾಗ ಮೊದಲು ನೆನಪಾಗಿದ್ದೇ ಯೋಧರು. ದೇಶ ಕಾಯಲು ಸಾಧ್ಯ ಆಗದೇ ಇದ್ರೂ ವೀರ ಯೋಧರ ಅಳಿಲು ಸೇವೆ ಮಾಡಬೇಕು ಅಂತ ಯೋಧರಿಗೆ ಮಾಸ್ಕ್ ನೀಡಲು ತೀರ್ಮಾನ ಮಾಡಿದಳು.

ಯೋಧರಿಗೆ ಮಾಸ್ಕ್​ ಹೊಲಿದು ಕೊಟ್ಟ ಉಡುಪಿಯ ಬಾಲಕಿ

ಇನ್ನೂ ಯೋಧರಿಗೆ ಮಾಸ್ಕ್ ನೀಡುವುದೇನೋ ಸರಿ ಆದ್ರೆ ಕಳುಹಿಸಿ ಕೊಡುವುದು ಹೇಗೆ, ಅವರಿಗೆ ತಲುಪಿದೆ ಅಂತ ಗೊತ್ತಾಗುವುದು ಆದ್ರೂ ಹೇಗೆ ಇತ್ಯಾದಿ ಪ್ರಶ್ನೆ ಮೂಡಿತು. ಆದ್ರೆ ಒಳ್ಳೆಯ ನಿರ್ಧಾರದಿಂದ ಹಿಂದೆ ಸರಿಯಬಾರದು ಅಂತ ಇಂಟರ್​​ನೆಟ್ ಮೂಲಕ ಸರ್ಚ್ ಮಾಡಿ, ಅದರಲ್ಲಿ ಇದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಳಾಸಕ್ಕೆ ಇಶಿತಾ ಹೊಲಿದ 300 ಮಾಸ್ಕ್​​ಗಳನ್ನು ಕಳುಹಿಸಿ ಕೊಟ್ಟಿದ್ದಾಳೆ. ಬಳಿಕ ರಾಜನಾಥ್ ಸಿಂಗ್ ಅವರೇ ಪತ್ರ ಬರೆಯುತ್ತಾರೆ ಅಂತ ನಿರೀಕ್ಷೆ ಮನೆಯವರಿಗೆ ಇರಲಿಲ್ಲ. ಇದೀಗ ರಾಜನಾಥ್ ಸಿಂಗ್ ಅವರೇ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.

ABOUT THE AUTHOR

...view details