ಕರ್ನಾಟಕ

karnataka

ETV Bharat / state

ದುಬಾರಿಯಾದ ಉಡುಪಿಯ ಸೈಂಟ್ ಮೇರಿಸ್ ದ್ವೀಪ.. ಪ್ರವಾಸಿಗರಿಗೆ ಕಷ್ಟ.. ಕಷ್ಟ..

ಸೈಂಟ್ ಮೇರಿಸ್ ದ್ವೀಪ.. ಕರಾವಳಿ ಪ್ರವಾಸೋದ್ಯಮದ ಹೆಮ್ಮೆಯ ಗರಿಮೆ, ದೇಶದಲ್ಲೇ ಪ್ರಸಿದ್ಧಿ ಪಡೆದ ಪ್ರವಾಸಿಗರ ಮೆಚ್ಚಿನ ತಾಣ. ಈ ದ್ವೀಪವೀಗ ಬಲು ದುಬಾರಿ ಆಗ್ಬಿಟ್ಟಿದೆ. ದರ ಹೆಚ್ಚಳದಿಂದ, ಬಡವರು, ದಡದಿಂದಲೇ ಐಲ್ಯಾಂಡ್ ನೋಡಿ ವಾವ್ ಎನ್ನುವಂತಾದ್ರೆ, ಹಣ ಇದ್ದವರು ಐಲ್ಯಾಂಡ್‌ಗೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ..

hike
ಉಡುಪಿಯ ಸೈಂಟ್ ಮೇರಿಸ್ ದ್ವೀಪ

By

Published : Oct 25, 2021, 10:39 PM IST

ಕಣ್ಣು ಹಾಯಿಸಿದಷ್ಟು ನೀಲಿ ಜಲ ಸಾಗರ.. ಬಿಳಿ ಹಾಲ್ನೋರೆಯ ಮಧ್ಯೆ ತೇಲುತ್ತಾ ಸಾಗುವ ಹಡಗು, ಹಡಗಿನಲ್ಲಿ ಎಂಜಾಯ್ ಮಾಡೋ ಪ್ರವಾಸಿಗರು, ಇವರೆಲ್ಲ ಹೀಗೆ ಹೋಗ್ತಾ ಇರೋದು ಉಡುಪಿಯ ಪ್ರಸಿದ್ಧ ಸೈಂಟ್ ಮೇರಿಸ್ ದ್ವೀಪಕ್ಕೆ. ಸದ್ಯದ ಸ್ಥಿತಿಯಲ್ಲಿ ಹೇಳೋದಾದರೆ ಶ್ರೀಮಂತರ ಐಲ್ಯಾಂಡ್‌ಗೆ.

ಉಡುಪಿಯ ಸೈಂಟ್ ಮೇರಿಸ್ ದ್ವೀಪ

ಹೌದು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಹಲವಾರು ಬೀಚ್ ಇವೆ. ಆದ್ರೆ ಪ್ರವಾಸಿಗರಿಗೆ ಮುಕ್ತವಾಗಿರುವ ಐಲ್ಯಾಂಡ್ ಅಂತ ಇರೋದು, ಉಡುಪಿಯ ಮಲ್ಪೆಯಿಂದ ಆರು ಕಿಲೋಮೀಟರ್ ದೂರದಲ್ಲಿರೋ ಸೈಂಟ್ ಮೇರಿಸ್ ದ್ವೀಪ ಮಾತ್ರ. ಹೀಗಾಗಿ ಪ್ರವಾಸಿಗರಿಗೆ ಐಲ್ಯಾಂಡ್​‌ನಲ್ಲಿ ಹೋಗ್ಬೇಕು ಅಂತ ಆಸೆ ಸಹಜ. ಆದ್ರೀಗ ಸದ್ಯ ದ್ವೀಪಕ್ಕೆ ಹೋಗುವ ಹಡಗುಗಳ ದರ ಮಾತ್ರ ಬಲು ದುಬಾರಿ ಆಗಿದೆ. ಇದು ಪ್ರವಾಸಿಗರಿಗೆ ಬಿಸಿ ತುಪ್ಪವಾಗಿದೆ.

ಕಳೆದ ಬಾರಿ ಸೀವಾಕ್ ನಿಂದ 250 ಇತ್ತು ಈ ಬಾರಿ 300 ರಷ್ಟು ಟಿಕೆಟ್ ದರ ಇದೆ. ಇನ್ನೂ ಮಲ್ಪೆ ಬೀಚ್‌ನಿಂದ 400 ಚಾರ್ಜ್ ಮಾಡ್ತಿದ್ದಾರೆ.. ಇದರ ಜೊತೆಗೆ ಪಾರ್ಕಿಂಗ್ ಮಾಡೋಕು ಹಣ ನೀಡುವ ಅನಿವಾರ್ಯತೆ ಪ್ರವಾಸಿಗನದ್ದು, ಜೊತೆಗೆ ದ್ವೀಪಕ್ಕೆ ಪ್ಲಾಸ್ಟಿಕ್‌ನಲ್ಲಿ ತಿಂಡಿ ತೆಗೆದುಕೊಂಡು ಹೋಗುವಂತಿಲ್ಲ ಹೀಗಾಗಿ ಅಲ್ಲೇ ಸಿಗುವ ಪುಡ್‌ಗಳನ್ನು ಖರೀದಿ ಮಾಡೋ ಅನಿವಾರ್ಯತೆ ಕೂಡ ಪ್ರವಾಸಿಗರದ್ದು.

3 ವರ್ಷದಿಂದ 10 ವರ್ಷದ ಮಕ್ಕಳಿಗೆ ಸ್ಪಲ್ಪ ರಿಯಾಯಿತಿ ಹೊರತು ಪಡಿಸಿದ್ರೆ ಎಲ್ಲರಿಗೂ ಒಂದೇ ರೇಟ್. ಇಷ್ಟು ಹಣ ಕೊಟ್ಟು ಐಲ್ಯಾಂಡ್ ಬಂದ್ರು ಕೇವಲ 1 ಗಂಟೆ ಮಾತ್ರ ನಿಲ್ಲೋಕೆ ಅವಕಾಶ ನೀಡಲಾಗುತ್ತಿದೆ. ಹಿಂದೆಲ್ಲ ಸರ್ಕಾರಿ ಶಾಲಾ ಮಕ್ಕಳು ಬಂದು ಐಲ್ಯಾಂಡ್ ಸೌಂದರ್ಯ ಸವಿಯುತ್ತಿದ್ದರು. ಆದರೀಗ ದುಬಾರಿ ದರದಿಂದ ಐಲ್ಯಾಂಡ್ ಹೋಗುವವರಲ್ಲಿ ಕೇವಲ ಶ್ರೀಮಂತರು ಮತ್ತ ಕೇರಳಿಗರು ಮಾತ್ರ ಕಂಡು ಬರುತ್ತಿದ್ದಾರೆ. ನಮ್ಮ ನಾಡಿನ ಸಾಮಾನ್ಯ ಜನ ದುಬಾರಿ ಐಲ್ಯಾಂಡ್​​ಗೆ ಹೋಗಲಾಗದೇ ದೂರವೇ ಉಳಿಯುವಂತಾಗಿದೆ.

ಒಟ್ನಲ್ಲಿ, ಕೊರೊನಾ ಕಾರಣದಿಂದ ಆರ್ಥಿಕವಾಗಿ ಕುಗ್ಗಿರುವ ಜನ ಐಲ್ಯಾಂಡ್ ಹೋಗಿ ಒಂದಷ್ಟು ಹೊತ್ತು, ನೆಮ್ಮದಿಯಿಂದ ಇದ್ಬರೋಣ ಅಂದ್ರೆ ದುಬಾರಿ ದರದಿಂದ ಸಾಧ್ಯ ಆಗ್ತಾ ಇಲ್ಲ, ಹೀಗಾಗಿ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾದ ಅಗತ್ಯತೆ ಇದೆ..

ABOUT THE AUTHOR

...view details