ಉಡುಪಿ: ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘ ನಾಳೆ ಕೊಲ್ಲೂರು ದೇವಳಕ್ಕೆ ಭೇಟಿ ನೀಡಲಿದ್ದಾರೆ.
ಕೊಲ್ಲೂರಿನ ಮೂಕಾಂಬಿಕ ದೇವಳದಲ್ಲಿ ನಡೆಯುವ ನವ ಚಂಡಿಯಾಗದ ಪೂರ್ಣಾಹುತಿಯಲ್ಲಿ ರಣೆಲ್ ವಿಕ್ರಮ ಸಿಂಘ ಭಾಗವಹಿಸಲಿದ್ದು, ಇದಕ್ಕಾಗಿ ಪೂರ್ವ ತಯಾರಿಗಳು ಮಾಡಿಕೊಳ್ಳಲಾಗಿದೆ.

ಶ್ರೀಲಂಕಾ ಪ್ರಧಾನಿ ಆಗಮನ ಹಿನ್ನೆಲೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರ ತನಕ ಕೊಲ್ಲೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಸತಿ ಸಮುಚ್ಚಯ ಸಂಪೂರ್ಣ ಬಂದ್ ಆಗಲಿದ್ದು, ವಾಹನ ಸಂಚಾರ ಸಹಿತ ಪಾದಚಾರಿಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ ಒಂಭತ್ತರಿಂದ ಆರರ ತನಕ ಭಕ್ತರಿಗೆ ದೇವಿಯ ದರ್ಶನ ಬಂದ್ ಆಗಲಿದೆ.
ಮಂಗಳೂರಿನಿಂದ ರಸ್ತೆ ಮಾರ್ಗ ಮೂಲಕ ರಣಿಲ್ ವಿಕ್ರಮ ಸಿಂಘೆ ಕೊಲ್ಲೂರಿಗೆ ಪ್ರಯಾಣಿಸಲಿದ್ದಾರೆ. ಭದ್ರತಾ ದೃಷ್ಟಿಯಿಂದ ದೇವಳದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.