ಕರ್ನಾಟಕ

karnataka

ETV Bharat / state

ಶ್ರೀ ಕೃಷ್ಣಮಠದಲ್ಲಿ ದೀಪಾವಳಿ ಸಂಭ್ರಮ : ತೈಲ ಅಭ್ಯಂಜನದಲ್ಲಿ ಮಿಂದೆದ್ದ ಭಕ್ತರು - ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ

ದೀಪಾವಳಿಯ ಪ್ರಯುಕ್ತ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಮಧುಸೂದನ ಆಚಾರ್ಯರು ಪೂಜೆ ನೆರವೇರಿಸಿದರು.

ಶ್ರೀ ಕೃಷ್ಣಮಠದಲ್ಲಿ ದೀಪಾವಳಿ ಸಂಭ್ರಮ

By

Published : Oct 28, 2019, 8:16 PM IST

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ಜಲ ಪೂರಣ ಗಂಗಾ ಪೂಜೆ ನೆರವೇರಿತು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಮಧುಸೂದನ ಆಚಾರ್ಯರು ಪೂಜೆ ನೆರವೇರಿಸಿದರು.

ಶ್ರೀ ಕೃಷ್ಣಮಠದಲ್ಲಿ ದೀಪಾವಳಿ ಸಂಭ್ರಮ

ನರಕ ಚತುರ್ದಶಿ ಪ್ರಯುಕ್ತ ಮಠದ ಚಂದ್ರ ಶಾಲೆಯಲ್ಲಿ ಎಣ್ಣೆ ಶಾಸ್ತ್ರ ಕಾರ್ಯಕ್ರಮ ನೆರವೇರಿತು. ಇದ ಸಂದರ್ಭದಲ್ಲಿ ಪರ್ಯಾಯ ಪಲಿಮಾರು ಶ್ರೀಗಳು ಸಹಿತ ಮಠಾಧೀಶರುಗಳು ತೈಲಾಭ್ಯಂಜನ ಮಾಡಿಕೊಂಡರು. ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ನೂರಾರು ಭಕ್ತರಿಗೆ ಸ್ವಾಮೀಜಿಗಳು ತೈಲ ಅಭ್ಯಂಜನ ಮಾಡಿಸುವುದು ಪದ್ಧತಿ.

ಬೆಂಗಳೂರಿನಲ್ಲಿರುವ ಹಿರಿಯ ಯತಿ ಪೇಜಾವರ ಶ್ರೀಗಳು ವಿದ್ಯಾಪೀಠದಲ್ಲಿ ಎಣ್ಣೆ ಶಾಸ್ತ್ರ ಹಾಗೂ ಗೋಮಾತೆಯ ಪೂಜೆ ಮಾಡಿದರು. ಹಿರಿಯ ವಿದ್ವಾಂಸರಾದ ಶ್ರೀ ಕೇಶವಬಾಯಿರಿ ಆಚಾರ್ಯರು ಪೇಜಾವರ ಶ್ರೀಗಳಿಗೆ ಎಣ್ಣೆಶಾಸ್ತ್ರ ನೆರವೇರಿಸಿದರು.

ABOUT THE AUTHOR

...view details