ಕರ್ನಾಟಕ

karnataka

ETV Bharat / state

ಉಡುಪಿ ರಸ್ತೆ ಅಪಘಾತ : ಆಸ್ಪತ್ರೆಯಲ್ಲಿ‌ ಸಾವನ್ನಪ್ಪಿದ ಯುವಕ - ಈಟಿವಿ ಭಾರತ ಕನ್ನಡ

ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಯುವಕ ಇಂದು ಮೃತಪಟ್ಟಿದ್ದಾನೆ.

udupi-road-accident-youth-died
ಉಡುಪಿ ರಸ್ತೆ ಅಪಘಾತ : ಆಸ್ಪತ್ರೆಯಲ್ಲಿ‌ ಸಾವನ್ನಪ್ಪಿದ ಯುವಕ

By

Published : Dec 3, 2022, 8:18 PM IST

ಉಡುಪಿ :ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಉಡುಪಿಯ ಕಟಪಾಡಿ ಎಂಬಲ್ಲಿ ನಡೆದಿದೆ. ಶುಕ್ರವಾರ ಕ್ಯಾಟರಿಂಗ್ ಮುಗಿಸಿ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸುಕ್ಷಿತ್ ಭಂಡಾರಿ ಎಂಬ ಯುವಕನಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ.

ಈ ಸಂದರ್ಭ ಇನ್ನೊಂದು ಬೈಕಿನಲ್ಲಿ ಹಿಂದಿನಿಂದ ಬರುತ್ತಿದ್ದ ಸ್ನೇಹಿತರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಕ್ಷಿತ್​ನನ್ನು ಕಂಡು ಸಾರ್ವಜನಿಕರಲ್ಲಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದವರು ಯಾರೂ ನೆರವಿಗೆ ಬಂದಿಲ್ಲ ಎಂದು ಹೇಳಲಾಗಿದೆ.

ಕೊನೆಗೆ ಗೆಳೆಯರು ಆಟೋದಲ್ಲಿ ಸುಕ್ಷಿತ್​ನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಗಂಭೀರವಾಗಿ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಬೈಂದೂರಿನಲ್ಲಿ ಹಳಿ ದಾಟುವಾಗ ರೈಲು ಡಿಕ್ಕಿ, ಯುವಕ ಸಾವು

ABOUT THE AUTHOR

...view details