ಕರ್ನಾಟಕ

karnataka

ETV Bharat / state

ಉಡುಪಿ: ಅಭಿವೃದ್ಧಿ ಕಾಮಗಾರಿ ಮಧ್ಯೆಯೂ ಕಾಪು ಮಂದಿಗೆ ಕತ್ತಲಿನ ಸಂಕಟ..!! - ಕಾಪು ವೃತ್ತ ನಿರೀಕ್ಷಕರ ಕಚೇರಿ

ಉಡುಪಿ ಜಿಲ್ಲೆಯ ಕಾಪು ತಾಲೂಕು ಆಗಿ ಪರಿವರ್ತನೆಗೊಂಡ ನಂತರ ಅಭಿವೃದ್ಧಿಯು ವೇಗ ಪಡೆದುಕೊಂಡಿದೆ. ಆದರೆ, ಈ ಮಧ್ಯೆ ಬೀದಿ ದೀಪದ ಸೌಲಭ್ಯವಿಲ್ಲದ ಕಾರಣ ಇಲ್ಲಿನ ಜನ ಕತ್ತಲಲ್ಲಿ ಓಡಾಡುವ ಅನಿವಾರ್ಯತೆ ಎದುರಾಗಿದೆ.

By

Published : Jul 11, 2020, 7:47 PM IST

ಉಡುಪಿ:ಕಾಪು ತಾಲೂಕು ಆಗಿ ಪರಿವರ್ತನೆಗೊಂಡ ನಂತರ ಅಭಿವೃದ್ಧಿಯು ವೇಗ ಪಡೆದುಕೊಂಡಿದೆ. ಆದರೆ, ಈ ಮಧ್ಯೆ ಬೀದಿ ದೀಪದ ಸೌಲಭ್ಯವಿಲ್ಲದ ಕಾರಣ ಇಲ್ಲಿನ ಜನ ಕತ್ತಲಲ್ಲಿ ಓಡಾಡುವ ಅನಿವಾರ್ಯತೆ ಎದುರಾಗಿದೆ.

ಉಡುಪಿ: ಅಭಿವೃದ್ಧಿ ಕಾಮಗಾರಿ ಮಧ್ಯೆಯೂ ಕಾಪು ಮಂದಿಗೆ ಕತ್ತಲಿನ ಸಂಕಟ..!!

ಪ್ರವಾಸೋದ್ಯಮ, ರಸ್ತೆ ಅಭಿವೃದ್ಧಿ, ಕೆರೆ ಅಭಿವೃದ್ಧಿ ಕಾಮಗಾರಿಗಳು ಉತ್ತಮ ವೇಗದಲ್ಲಿ ನಡೆಯುತ್ತಿದೆ. ಹೀಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಪುವಿನಲ್ಲಿ ಸೂಕ್ತ ಬೀದಿ ದೀಪ ಸೌಲಭ್ಯವಿಲ್ಲದ ಹಿನ್ನೆಲೆ ಜನತೆ ಕತ್ತಲಲ್ಲಿ ಓಡಾಟ ಮಾಡಬೇಕಾದ ಅನಿವಾರ್ಯತೆ ಇದೆ.

ಕಾಪು ವೃತ್ತ ನಿರೀಕ್ಷಕರ ಕಚೇರಿಯಿಂದ ಕಾಪು ಪೇಟೆವರೆಗೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲಾಗಿದೆ. ಆದರೆ, ಪುರಸಭೆ ಇನ್ನೂ ಕೂಡ ಅದನ್ನು ಸರಿ ಮಾಡಿಲ್ಲ. ಹೀಗಾಗಿ ರಾತ್ರಿ ವೇಳೆ ಈ ರಸ್ತೆ ಮೂಲಕ ಓಡಾಡುವ ಜನಗಳಿಗೆ ಇದರಿಂದ ಸಮಸ್ಯೆಯಾಗಿದೆ. ಈ ಕುರಿತು ಹಲವಾರು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಕಾಪು ಜನತೆಯ ಆಗ್ರಹವಾಗಿದೆ.

ABOUT THE AUTHOR

...view details