ಕರ್ನಾಟಕ

karnataka

ETV Bharat / state

ಕಂಬಳದಲ್ಲಿ ಮತ್ತೊಂದು ದಾಖಲೆ: ಶ್ರೀನಿವಾಸ ಗೌಡರನ್ನು ಮೀರಿಸಿದ ನಿಶಾಂತ್ ಶೆಟ್ಟಿ - udupi nishanth shetty achiement in kambala

ಕಂಬಳಗದ್ದೆಯಲ್ಲಿ ವೇಗವಾಗಿ ಕೋಣ ಓಡಿಸಿ ಉಸೇನ್ ಬೋಲ್ಟ್ ಗಿಂತಲೂ ವೇಗಿ ಎನಿಸಿಕೊಂಡಿದ್ದ ಶ್ರೀನಿವಾಸ ಗೌಡರನ್ನು ಕಂಬಳದಲ್ಲಿ ಮತ್ತೋರ್ವ ಯುವಕ ಮೀರಿಸಿದ್ದಾರೆ.

udupi nishanth sheety achiement in kambala
ಶ್ರೀನಿವಾಸ ಗೌಡರನ್ನು ಮೀರಿಸಿದ ನಿಶಾಂತ್ ಶೆಟ್ಟಿ

By

Published : Feb 18, 2020, 1:06 PM IST

Updated : Feb 18, 2020, 3:22 PM IST

ಮಂಗಳೂರು/ಉಡುಪಿ:ಕಂಬಳಗದ್ದೆಯಲ್ಲಿ ವೇಗವಾಗಿ ತುಳುನಾಡ ಉಸೇನ್ ಬೋಲ್ಟ್ ಎಂದು ಪ್ರಶಂಸೆಗೆ ಪಾತ್ರವಾದ ಶ್ರೀನಿವಾಸ ಗೌಡರನ್ನು ಕಂಬಳದಲ್ಲಿ ಮತ್ತೋರ್ವ ಮೀರಿಸಿದ್ದಾರೆ.

ಶ್ರೀನಿವಾಸ ಗೌಡರನ್ನು ಮೀರಿಸಿದ ನಿಶಾಂತ್ ಶೆಟ್ಟಿ

ಉಡುಪಿ ಜಿಲ್ಲೆಯ ಬಜಗೋಳಿಯ ಜೋಗಿಬೆಟ್ಟಿ ನಿಶಾಂತ್ ಶೆಟ್ಟಿ ಈ ಸಾಧನೆ ಮಾಡಿದವರು. ಶ್ರೀನಿವಾಸ ಗೌಡ ಅವರು 142.5 ಮೀಟರ್ ದೂರವನ್ನು 13.62 ಸೆಕೆಂಡ್‌ನಲ್ಲಿ ತಲುಪಿ ಸಾಧನೆ ಮಾಡಿದ್ದರು. ಅದನ್ನು 100 ಮೀಟರ್‌ಗೆ ಹೋಲಿಸಿದರೆ 9.55 ಸೆಕೆಂಡ್ ಆಗಿತ್ತು. ಅದು ಉಸೇನ್ ಬೋಲ್ಟ್ ಅವರ 9.58 ಸೆಕೆಂಡ್ ದಾಖಲೆಯನ್ನು ಮೀರಿಸಿತ್ತು. ಇದೀಗ ಶ್ರೀನಿವಾಸ ಗೌಡ ಅವರ ದಾಖಲೆಯನ್ನು ನಿಶಾಂತ್ ಶೆಟ್ಟಿ ಮೀರಿಸಿದ್ದಾರೆ.

ಶ್ರೀನಿವಾಸ ಗೌಡರನ್ನು ಮೀರಿಸಿದ ನಿಶಾಂತ್ ಶೆಟ್ಟಿ

ವೇಣೂರಿನಲ್ಲಿ ನಡೆದ ಸೂರ್ಯ ಚಂದ್ರ ಜೋಡುಕೆರೆ ಕಂಬಳದಲ್ಲಿ ನಿಶಾಂತ್ ಶೆಟ್ಟಿ 143 ಉದ್ದದ ಕಂಬಳಗದ್ದೆಯಲ್ಲಿ 13.61 ಸೆಕೆಂಡ್ ನಲ್ಲಿ ಗುರಿ ತಲುಪಿದ್ದಾರೆ. ಈ ವೇಗ 100 ಮೀಟರ್ ಗೆ ಹೋಲಿಸಿದರೆ 9.52 ಸೆಕೆಂಡ್ ಆಗಿದೆ. ಈ ಮೂಲಕ ಕಂಬಳ ಗದ್ದೆಯಲ್ಲಿ ನಿಶಾಂತ್ ಶೆಟ್ಟಿ ಅವರು ಶ್ರೀನಿವಾಸ ಗೌಡ ಅವರನ್ನು ಮೀರಿಸಿದ್ದಾರೆ.

Last Updated : Feb 18, 2020, 3:22 PM IST

ABOUT THE AUTHOR

...view details