ಕರ್ನಾಟಕ

karnataka

ETV Bharat / state

ವೈರಲ್​ ಆಡಿಯೋದಲ್ಲಿ ಯಾವುದೇ ತಪ್ಪಿಲ್ಲ: ಶೋಭಾ ಕರಂದ್ಲಾಜೆ

ಸಿದ್ದರಾಮಯ್ಯ ನವರು ಮೊದಲಿನಿಂದಲೂ ಡರ್ಟಿ ಗೇಮ್ ಆಡುತ್ತಿದ್ದಾರೆ. ಜೆಡಿಎಸ್ ಬಿಟ್ಟ ನಂತರ ಕಾಂಗ್ರೆಸ್​​ನ್ನು ಬ್ಲ್ಯಾಕ್ ಮೇಲ್ ಮಾಡುತ್ತಲೇ ಇದ್ದಾರೆ. ಬ್ಲ್ಯಾಕ್‌ ಮೇಲ್ ಮೂಲಕವೇ  ಐದು ವರ್ಷ ಸಿಎಂ ಆಗಿದ್ದರು. ಈಗ ಅದೇ ತಂತ್ರದ ಮೂಲಕ ಪ್ರತಿಪಕ್ಷ ನಾಯಕರಾಗಿದ್ದಾರೆ ಎಂದು ಸಂಸದೆ ಕರಂದ್ಲಾಜೆ ಆರೋಪಿಸಿದ್ದಾರೆ.

ಶೋಭಾ ಕರಂದ್ಲಾಜೆ

By

Published : Nov 4, 2019, 9:52 PM IST

ಉಡುಪಿ: ಶಾಸಕರ ರಾಜೀನಾಮೆಯಿಂದಾಗಿ ನಮ್ಮ ಬಿಜೆಪಿ ಸರಕಾರ ರಚನೆಯಾಗಿದೆ ಎಂದು ಯಡಿಯೂರಪ್ಪ ಹೇಳಿರುವುದು ಆಡಿಯೋದಲ್ಲಿದೆ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ಅವರಿಗೆ ಬೇಕಾದ ಪಕ್ಷಕ್ಕೆ ಸೇರಬಹುದು. ಅನರ್ಹರು ಯಾವುದೇ ಬಂಧನದಲ್ಲಿ ಇಲ್ಲ, ಯಾವ ಕ್ಷೇತ್ರದಲ್ಲಿ, ಯಾವ ಪಕ್ಷದಿಂದ ಬೇಕಾದರೂ ಸ್ಪರ್ಧಿಸಬಹುದು. ವೈರಲ್​ ಆದ ಆಡಿಯೋ ಬಾಂಬ್ ಆಗೋದಕ್ಕೆ ಸಾಧ್ಯವಿಲ್ಲ. ಶಾಸಕರ ರಾಜೀನಾಮೆಯಿಂದಾಗಿ ನಮ್ಮ ಬಿಜೆಪಿ ಸರಕಾರ ರಚನೆಯಾಗಿದೆ ಎಂದು ಯಡಿಯೂರಪ್ಪ ಹೇಳಿದ್ದರು. ಹೀಗೆ ಯಡಿಯೂರಪ್ಪ ಹೇಳಿರೋದ್ರಲ್ಲಿ ತಪ್ಪೇನಿದೆ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ವೈರಲ್​ ಆಡಿಯೋ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಸಿದ್ಧರಾಮಯ್ಯರಿಂದ ಡರ್ಟಿ ಗೇಮ್:

ಸಿದ್ದರಾಮಯ್ಯ ನವರು ಮೊದಲಿನಿಂದಲೂ ಡರ್ಟಿ ಗೇಮ್ ಆಡುತ್ತಿದ್ದಾರೆ. ಜೆಡಿಎಸ್ ಬಿಟ್ಟ ನಂತರ ಕಾಂಗ್ರೆಸ್​​ನ್ನು ಬ್ಲ್ಯಾಕ್ ಮೇಲ್ ಮಾಡುತ್ತಲೇ ಇದ್ದಾರೆ. ಬ್ಲ್ಯಾಕ್‌ ಮೇಲ್ ಮೂಲಕವೇ ಐದು ವರ್ಷ ಸಿಎಂ ಆಗಿದ್ದರು. ಈಗ ಅದೇ ತಂತ್ರದ ಮೂಲಕ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರಿಂದ ಏನೂ ಕಲಿಯುವ ಅಗತ್ಯವಿಲ್ಲ. ಜನರೇ ಅವರನ್ನ ತಿರಸ್ಕರಿಸಿದ್ದಾರೆ ಎಂದು ಟಾಂಗ್​ ನೀಡಿದರು.

ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ:

ದೇವೇಗೌಡರು ಹಾಗೂ ಹೆಚ್​.ಡಿ.ಕುಮಾರಸ್ವಾಮಿ ಬಗ್ಗೆ ಏನೂ ಹೇಳಲ್ಲ. ಕಳೆದ ಒಂದು ವರ್ಷದ ಕಾಂಗ್ರೆಸ್ ಜೆಡಿಎಸ್​​ನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ. ಜೆಡಿಎಸ್​ನ ಹಲವು ನಾಯಕರೇ ಇದನ್ನು ಹೇಳಿದ್ದಾರೆ. ಅವರಿಬ್ಬರ ಬಗ್ಗೆ ನಾನು ಮಾತನಾಡಲ್ಲ. ಉಪಚುನಾವಣೆ ಆದಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.

ಇಡಿ ಬಾಸ್ ಅಲ್ಲ:

ಇಡಿಯಿಂದ ಡಿಕೆಶಿ ಬಂಧನ ವಿಚಾರವಾಗಿ ಮಾತನಾಡಿದ ಶೋಭಾ, ಇಡಿ ಅಧಿಕಾರಿಗಳು ಸಾರ್ವಜನಿಕವಾಗಿ ಹೇಳಿಕೆ ಕೊಡಲ್ಲ. ಸ್ವಂತ ಲಾಭಕ್ಕಾಗಿ ಇಡಿಯನ್ನು ಬಳಸಬೇಡಿ. ಇಡಿಗೆ ಯಾವುದೇ ಬಾಸ್ ಇಲ್ಲ. ಅದೊಂದು ಸಂವಿಧಾನ ಪ್ರಕಾರ ರಚಿತವಾದ ಸಂಸ್ಥೆ. ಇಡಿಗೆ ಯಾವುದೇ ಬಾಸ್​ನ ಅಗತ್ಯ ಇರೋದಿಲ್ಲ ಅಂತಾ ಶೋಭಾ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details