ಉಡುಪಿ :ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಜನ ಸಾಯುತ್ತಿದ್ದರೆ, ಮತ್ತೊಂದೆಡೆ ಮದ್ಯ ಸಿಗುತ್ತಿಲ್ಲ ಎಂದು ಆರು ಮಂದಿ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ರಾಜ್ಯದಲ್ಲಿ ಕೊರೊನಾಗಿಂತ ಎಣ್ಣೆ ಸಿಗದೆ ಸತ್ತವರೇ ಹೆಚ್ಚು.. ಉಡುಪಿಯಲ್ಲೇ ಆರು ಕುಡುಕರ ಆತ್ಮಹತ್ಯೆ!! - ಮದ್ಯ ಮಾರಾಟ ಸ್ಥಗಿತ ಕುಡುಕರ ಸಾವು
ಕೋವಿಡ್-19 ಕಾವಿಗೆ ಇಡೀ ದೇಶವೇ ಸ್ತಬ್ಧವಾಗಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇತ್ತ ಮದ್ಯದಂಗಡಿಗಳೂ ಮುಚ್ಚಿವೆ. ಎಣ್ಣೆ ಸಿಗದೆ ಕುಡುಕರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲೇ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಾರ್ಕಳದ ತೆಳ್ಳಾರು ಗ್ರಾಮದ ನಾಗೇಶ್ ಆಚಾರ್ಯ (37) ಎಂಬಾತ ಮಾ. 26ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡುಕೊಂಡಿದ್ದ. ಕಾಪು ತಾಲೂಕು ಪಡು ಗ್ರಾಮದ ಶಶಿಧರ ಸುವರ್ಣ (46), ಮಾರ್ಚ್ 26 ರಂದು ಕುಂದಾಪುರ ತಾಲೂಕು ಹೆಮ್ನಾಡಿಯ ರಾಘವೇಂದ್ರ (37), ಮಾ. 28ರಂದು ಕಾರ್ಕಳ ತಾಲೂಕು ವರಂಗ ಗ್ರಾಮದ ಅರವಿಂದ್ (37), ಮಾ. 26ರಂದು ಮಲಗಿದ್ದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕಟ್ಟೆಯಲ್ಲಿ ಮಾ. 24ರಂದು ವಿಷ ಸೇವಿಸಿ ವಾಲ್ಟರ್ ಡಿಸೋಜ(57) ಎಂಬುವರು ಆತ್ಮಹತ್ಯೆ ಮಾಡಿಕೊಂಡ್ರೆ, ಉದ್ಯಾವರ ಗ್ರಾಮದ ಗಣೇಶ(42) ಮಾ. 26ರಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಕೊಂಡಿದ್ದಾರೆ. ಸಾವಿಗೀಡಾದವರು ವಿಪರೀತ ಮದ್ಯ ವ್ಯಸನಿಗಳಾಗಿದ್ದರು ಎನ್ನಲಾಗ್ತಿದೆ.