ಕರ್ನಾಟಕ

karnataka

ETV Bharat / state

ಸಂಪೂರ್ಣ ಅನ್​ಲಾಕ್​ ನಂತರ ಉಡುಪಿ ಕೃಷ್ಣನ ದರ್ಶನ:ಈಶಪ್ರಿಯ ತೀರ್ಥರು - ಈಶಪ್ರಿಯ ಸ್ವಾಮೀಜಿ

ದೇಶದಲ್ಲಿ ಸಂಪೂರ್ಣ ಅನ್‌ಲಾಕ್ ಆದ ಬಳಿಕ ಶ್ರೀಕೃಷ್ಣ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಹೇಳಿದ್ದಾರೆ.

sdfdsd
ಈಶಪ್ರಿಯ ತೀರ್ಥರು

By

Published : Jul 2, 2020, 10:34 PM IST

ಉಡುಪಿ:ದೇಶದಲ್ಲಿ ಸಂಪೂರ್ಣ ಅನ್‌ಲಾಕ್ ಆದ ಬಳಿಕ ಶ್ರೀಕೃಷ್ಣ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಹೇಳಿದ್ದಾರೆ.

ಈಶಪ್ರಿಯ ತೀರ್ಥರು

ಮಠದ ಪರಂಪರೆ ಉಳಿಸಲು ಈ ನಿರ್ಧಾರ ಮಾಡಲಾಗಿದ್ದು, ದೇಶದೆಲ್ಲೆಡೆ ಪರಿಸ್ಥಿತಿ ನೋಡಿ ಕೃಷ್ಣ ಮಠದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ಎಲ್ಲ ಭಕ್ತರು ಮನೆಯಲ್ಲಿಯೇ ಕುಳಿತು ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿ. ಶ್ರೀಕೃಷ್ಣ ಮಠದಲ್ಲಿ ಋತ್ವಿಜರು ನಿರಂತರವಾಗಿ ದೇಶಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ.

ಆಯುರ್ವೇದದಲ್ಲಿ ಹೇಳಿದಂತೆ ಮನಸ್ಸಿನ ದೋಷಗಳು ಎಲ್ಲ ರೋಗಗಳಿಗೆ ಕಾರಣ. ಮನಸ್ಸು ಚೆನ್ನಾಗಿದ್ದರೆ ಎಂತಹ ರೋಗವನ್ನೂ ಗೆಲ್ಲಬಹುದು. ಎಲ್ಲರೂ ಮನಸ್ಸನ್ನು ಗಟ್ಟಿಯಾಗಿಸಿ, ಒಳ್ಳೆಯ ಚಿಂತನೆ ಬೆಳೆಸಿಕೊಳ್ಳಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.

ABOUT THE AUTHOR

...view details