ಉಡುಪಿ:ಉಡುಪಿ ಪರ್ಯಾಯ ಮಹೋತ್ಸವ ಅಂದ ಕೂಡಲೇ ಇಡೀ ಉಡುಪಿಗೆ ನಾಡಹಬ್ಬದ ಸಂಭ್ರಮ. ಜ17ರ ರಾತ್ರಿಯಿಂದ ಹಿಡಿದು ಬೆಳಗ್ಗಿನ ಜಾವದವರೆಗೂ ಇಡೀ ಉಡುಪಿಗೆ ಉಡುಪಿಯೇ ಎಚ್ಚರದಲ್ಲಿರುತ್ತದೆ. ಈ ಬಾರಿ ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಉಡುಪಿ ಕೃಷ್ಣ ಮಠದಲ್ಲಿ 250ನೇ ಪರ್ಯಾಯ ಸಂಭ್ರಮ... - ಜ.17, 18 ರಂದು ಪರ್ಯಾಯ ಮಹೋತ್ಸವ ಆಚರಣೆ
ಉಡುಪಿ ಪರ್ಯಾಯ ಮಹೋತ್ಸವ ಅಂದ ಕೂಡಲೇ ಇಡೀ ಉಡುಪಿಗೆ ನಾಡಹಬ್ಬದ ಸಂಭ್ರಮ. ಜ.17 ರ ರಾತ್ರಿಯಿಂದ ಹಿಡಿದು ಬೆಳಗ್ಗಿನ ಜಾವದವರೆಗೂ ಇಡೀ ಉಡುಪಿಗೆ ಉಡುಪಿಯೇ ಎಚ್ಚರದಲ್ಲಿರುತ್ತದೆ. ಈ ಬಾರಿ ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಉಡುಪಿ ಕೃಷ್ಣ ಮಠದಲ್ಲಿ 250 ನೇ ಪರ್ಯಾಯ ಸಂಭ್ರಮ...
ಜ.17, 18 ರಂದು ಪರ್ಯಾಯ ಮಹೋತ್ಸವ ಆಚರಣೆ ನಡೆಯಲಿದ್ದು, ಅದಮಾರು ಮಠದ ಕಿರಿಯ ಮಠಾಧೀಶ ಈಶಪ್ರಿಯ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಜ.18ರ ಮುಂಜಾನೆ 1.30ಕ್ಕೆ ಪರ್ಯಾಯ ಮೆರವಣಿಗೆ ಆರಂಭವಾಗಲಿದ್ದು, 5.57ಕ್ಕೆ ಅಕ್ಷಯಪಾತ್ರೆ ಹಸ್ತಾಂತರ, ಸರ್ವಜ್ಞ ಪೀಠಾರೋಹಣ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಕೃಷ್ಣದೇವರಿಗೆ ಮಹಾಪೂಜೆ ನಡೆಯಲಿದ್ದು, ಅಪರಾಹ್ನ 2.30ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರು ಸಭೆ ನಡೆಯಲಿದೆ. ಪರ್ಯಾಯ ದರ್ಬಾರಿನಲ್ಲಿ ಸಿಎಂ ಯಡಿಯೂರಪ್ಪ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಮೈಸೂರು ಒಡೆಯರು ಭಾಗಿಯಾಗಲಿದ್ದಾರೆ.