ಕರ್ನಾಟಕ

karnataka

ETV Bharat / state

ನವರಾತ್ರಿ ಸಂಭ್ರಮ: ದೇವಿ ಅಲಂಕಾರಗಳಲ್ಲಿ ಮಿಂದೆದ್ದ ಉಡುಪಿಯ ಕೃಷ್ಣ

ನವರಾತ್ರಿ ಆಚರಣೆ ವೇಳೆ ಉಡುಪಿ ಕೃಷ್ಣನಿಗೆ ದಿನಂಪ್ರತಿ ನಾನಾ ದೇವಿಯರ ಅಲಂಕಾರ ಮಾಡಲಾಗುತ್ತದೆ. ಸ್ವತಃ ಮಠಾಧೀಶರೇ ಈ ಅಲಂಕಾರ ಮಾಡುವುದರಿಂದ ವಿಶೇಷ ಮೆರಗು ಮೂಡುತ್ತದೆ.

udupi-krishna-as-devi-in-her-various-manifestations-during-navratri
ನವರಾತ್ರಿ ಸಂಭ್ರಮ: ದೇವಿ ಅಲಂಕಾರಗಳಲ್ಲಿ ಮಿಂದೆದ್ದ ಉಡುಪಿಯ ಕೃಷ್ಣ

By

Published : Oct 16, 2021, 4:44 AM IST

ಉಡುಪಿ:ಇಲ್ಲಿನ ಕೃಷ್ಣ ದೇವರು ಅಲಂಕಾರ ಪ್ರಿಯ. ಬಹುತೇಕ ದೇವಾಲಯಗಳಲ್ಲಿ ಪ್ರತಿದಿನ ಏಕರೂಪದ ಅಲಂಕಾರ ನಡೆದರೆ, ಉಡುಪಿಯ ಕೃಷ್ಣನಿಗೆ ವೈವಿಧ್ಯಮಯ ಅಲಂಕಾರ ನಡೆಸಲಾಗುತ್ತದೆ. ಅದರಲ್ಲೂ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಉಡುಪಿಯ ಕೃಷ್ಣ ಸ್ತ್ರೀ ರೂಪಿಯಾಗಿ ಭಕ್ತರಿಗೆ ದರ್ಶನ ನೀಡುತ್ತಾನೆ.

ವಿಶೇಷ ಅಲಂಕಾರದಲ್ಲಿ ಉಡುಪಿ ಕೃಷ್ಣ

ನವರಾತ್ರಿ ಆಚರಣೆ ವೇಳೆ ಉಡುಪಿ ಕೃಷ್ಣನಿಗೆ ದಿನಂಪ್ರತಿ ನಾನಾ ದೇವಿಯರ ಅಲಂಕಾರ ಮಾಡಲಾಗುತ್ತದೆ. ಸ್ವತಃ ಮಠಾಧೀಶರೇ ಈ ಅಲಂಕಾರ ಮಾಡುವುದರಿಂದ ವಿಶೇಷ ಮೆರಗು ಮೂಡುತ್ತದೆ. ಸದ್ಯ ಅದಮಾರು ಮಠದ ಪರ್ಯಾಯೋತ್ಸವ ನಡೆಯುತ್ತಿದ್ದು, ಈ ಬಾರಿ ನವರಾತ್ರಿಯ 8 ದಿನಗಳ ಕಾಲ, ವಿವಿಧ ದೇವಿಯರ ಅಲಂಕಾರದಿಂದ ಕೃಷ್ಣ ದೇವರನ್ನು ಪೂಜಿಸಲಾಯಿತು.

ವಿಶೇಷ ಅಲಂಕಾರದಲ್ಲಿ ಉಡುಪಿ ಕೃಷ್ಣ

ಗಜಲಕ್ಷ್ಮೀ, ಮೋಹಿನಿ, ರುಕ್ಮಿಣಿ, ಲಕ್ಷ್ಮಿ, ಚಪ್ಪರ ಮಂಚದಲ್ಲಿ ರುಕ್ಮಿಣಿ, ರುಕ್ಮಿಣಿ ಪ್ರೇಮ, ಮಹಿಷಾಸುರ ಮರ್ಧಿನಿ, ಶಾರದೆ ಹೀಗೆ 8 ಅವತಾರಗಳಲ್ಲಿ ಕಡಗೋಲು ಕೃಷ್ಣ ದೇವರು ಕಂಗೊಳಿಸಿದ. ಇಷ್ಟು ಅಲಂಕಾರದಲ್ಲಿ ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಕೈಚಳಕ ಮನಸೆಳೆದಿದೆ. ಕೇವಲ ನವರಾತ್ರಿ ಮಾತ್ರವಲ್ಲ ವರ್ಷವಿಡಿ ಪ್ರತಿದಿನ ವಿವಿಧ ಅಲಂಕಾರಗಳಿಂದ ಕೃಷ್ಣ ದೇವರನ್ನು ಪೂಜಿಸಲಾಗುತ್ತದೆ.

ಇದನ್ನೂ ಓದಿ:ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

ABOUT THE AUTHOR

...view details