ಕರ್ನಾಟಕ

karnataka

ETV Bharat / state

'ಪುನೀತ್ ಮಾಮ' ಬೇಕು ಎಂದು ರಾತ್ರೀ ಇಡೀ ಅತ್ತು ಹಠ ಹಿಡಿದ ಪುಟ್ಟ ಬಾಲಕ.. ಮನಸ್ಸು ಭಾರವಾಯ್ತು ಅವನ ಅಮ್ಮನ ಉತ್ತರ ಕೇಳಿ.. - ಯುವರತ್ನ ಪುನೀತ್​ ರಾಜಕುಮಾರ ನಿಧನ ಸುದ್ದಿ

ಕಾರ್ಕಳ ಕಲ್ಯದ ಐದು ವರ್ಷದ ದಕ್ಷ್ ಎಂಬ ಮಗು ಪುನೀತ್ ಮಾಮ ಬೇಕು ಎಂದು ರಾತ್ರಿ ಇಡೀ ಗೋಳಾಡಿದೆ. ಬಾಲ್ಯದಿಂದಲೂ ಪುನೀತ್ ಚಿತ್ರಗಳನ್ನು ತಪ್ಪದೆ ನೋಡುತ್ತಿದ್ದ ದಕ್ಷ್, ನಿನ್ನೆ ರಾತ್ರಿ ಒಂದೇ ಸಮನೆ ಅಳುತ್ತಾ ಹಠ ಹಿಡಿದು ಕೂತಿದ್ದಾನೆ..

udupi-kid-cried-over-night-for-puneeth-rajkumar-death
ಪವರ್​​ ಸ್ಟಾರ್​ ಪುನೀತ್ ರಾಜಕುಮಾರ್​​ ಸಾವು

By

Published : Oct 31, 2021, 3:22 PM IST

ಉಡುಪಿ :ಪವರ್​​ ಸ್ಟಾರ್​ ಪುನೀತ್ ರಾಜಕುಮಾರ್​​ ಸಾವು ಕರುನಾಡನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ರಾತ್ರಿ ಇಡೀ ಮಲಗದೇ ಅಪ್ಪು ಪುಟ್ಟ ಅಭಿಮಾನಿಯೊಬ್ಬ ಕಣ್ಣೀರು ಹಾಕಿದ ಘಟನೆ ಉಡುಪಿಯಲ್ಲಿ ನಡೆದಿದೆ.

'ಪುನೀತ್ ಮಾಮ' ಬೇಕು ಎಂದು ರಾತ್ರೀ ಇಡೀ ಅತ್ತು ಹಠ ಹಿಡಿದ ಪುಟ್ಟ ಬಾಲಕ

ಕಾರ್ಕಳ ಕಲ್ಯದ ಐದು ವರ್ಷದ ದಕ್ಷ್ ಎಂಬ ಮಗು ಪುನೀತ್ ಮಾಮ ಬೇಕು ಎಂದು ರಾತ್ರಿ ಇಡೀ ಗೋಳಾಡಿದೆ. ಬಾಲ್ಯದಿಂದಲೂ ಪುನೀತ್ ಚಿತ್ರಗಳನ್ನು ತಪ್ಪದೆ ನೋಡುತ್ತಿದ್ದ ದಕ್ಷ್, ನಿನ್ನೆ ರಾತ್ರಿ ಒಂದೇ ಸಮನೆ ಅಳುತ್ತಾ ಹಠ ಹಿಡಿದು ಕೂತಿದ್ದಾನೆ.

ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ. ಅವರನ್ನು ಮರೆಯಲು ಆಗುತ್ತಿಲ್ಲ ಎಂದು ಹಠ ಹಿಡಿದು ಕೂತಿದ್ದ ಮಗನಿಗೆ ಅವನ ತಾಯಿ ತುಳುವಿನಲ್ಲಿ, 'ಅವರು ತೀರಿಕೊಂಡಿಲ್ಲ. ಸಿನಿಮಾದಲ್ಲಿ ಹಾಗೆ ತೋರಿಸಿದ್ದಾರೆ' ಎಂದು ಸಂತೈಸುತ್ತಿದ್ದಾರೆ. ಸದ್ಯ ಮುಗ್ದ ಮಗುವಿನ ಅಳುವಿನ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ABOUT THE AUTHOR

...view details