ಉಡುಪಿ:ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲ ಗಂಟೆಗಳಿಂದ ಸುರಿಯುತ್ತಿರುವ ಜೋರು ಮಳೆಯಿಂದಾಗಿ ಜಿಲ್ಲೆಯಲ್ಲಿ ಭಾರಿ ಅನಾಹುತ ಸಂಭವಿಸಿದೆ.
ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ.. ಬಾಯ್ಬಿಟ್ಟ ಪೆರ್ಡೂರು ಹರಿಖಂಡಿಗೆ ಸಂಪರ್ಕ ರಸ್ತೆ - ಉಡುಪಿ ಮಳೆ
ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ ಬಳಿಕ ಗುಡುಗು ಸಹಿತ ಮಳೆಯಾಗಿದ್ದು, ಮಳೆಯ ರಭಸಕ್ಕೆ ಪೆರ್ಡೂರು ಹರಿಖಂಡಿಗೆ ಸಂಪರ್ಕ ರಸ್ತೆ ಬಾಯ್ಬಿಟ್ಟಿದ್ದು ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ.
![ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ.. ಬಾಯ್ಬಿಟ್ಟ ಪೆರ್ಡೂರು ಹರಿಖಂಡಿಗೆ ಸಂಪರ್ಕ ರಸ್ತೆ](https://etvbharatimages.akamaized.net/etvbharat/prod-images/768-512-4764215-thumbnail-3x2-chai.jpg)
ಮಧ್ಯಾಹ್ನ ಬಳಿಕ ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗಿದ್ದು, ಗುಡುಗು-ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗ್ಗೆ ಕಾದು ಕೆಂಡದಂತಾಗಿದ್ದ ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಏಕಾಏಕಿ ಭರ್ಜರಿ ಮಳೆಯಾಗಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಕೆಲವೆಡೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಮಳೆ ಹಿನ್ನೆಲೆಯಲ್ಲಿ ಹಲವೆಡೆ ವಿದ್ಯುತ್ ನಿಲುಗಡೆ ಕೂಡಾ ಆಗಿದೆ. ರಾತ್ರಿ ಕೂಡ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಮಳೆಯ ರಭಸಕ್ಕೆ ಪೆರ್ಡೂರು ಹರಿಖಂಡಿಗೆ ಸಂಪರ್ಕ ರಸ್ತೆ ಬಾಯ್ಬಿಟ್ಟಿದ್ದು ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ರಸ್ತೆ ಸಂಚಾರ ಸ್ಥಗಿತವಾಗಿ ಸ್ಥಳೀಯರು ಬದಲಿ ರಸ್ತೆ ಮೊರೆ ಹೋಗಿದ್ದಾರೆ.