ಉಡುಪಿ:ಶಾಲೆಯಿಂದ ಮನೆಗೆ ತೆರಳಲು ಕಾಲುಸಂಕ ದಾಟುವ ಸಂದರ್ಭದಲ್ಲಿ ಆಯತಪ್ಪಿ ಹಳ್ಳಕ್ಕೆ ಬಿದ್ದು ನೀರುಪಾಲಾಗಿದ್ದ ಇಲ್ಲಿನ ಕಾಲ್ತೋಡುವಿನ ಎರಡನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಎರಡು ದಿನಗಳ ಬಳಿಕ ಪತ್ತೆ ಆಗಿದೆ. ಸೋಮವಾರ ಸಂಜೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಸಮೀಪ ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ ಪೂಜಾರಿ ಅವರ ಪುತ್ರಿ ಸನ್ನಿಧಿ (7) ನೀರುಪಾಲಾಗಿದ್ದಳು.
ಕಾಲುಸಂಕದಿಂದ ಜಾರಿ ಹಳ್ಳಕ್ಕೆ ಬಿದ್ದ ಉಡುಪಿ ವಿದ್ಯಾರ್ಥಿನಿಯ ಶವ ಪತ್ತೆ - ಉಡುಪಿಯ ವಿದ್ಯಾರ್ಥಿನಿ ಶವ ಪತ್ತೆ
ಕಾಲುಸಂಕ ದಾಟುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ನೀರುಪಾಲಾಗಿದ್ದ ಉಡುಪಿಯ ವಿದ್ಯಾರ್ಥಿನಿ ಶವ ಪತ್ತೆ ಆಗಿದೆ.
Etv Bharatಹಳ್ಳಕ್ಕೆ ಬಿದ್ದ ಉಡುಪಿಯ ವಿದ್ಯಾರ್ಥಿನಿ ಶವ ಪತ್ತೆ
ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ದಳ ಮೀನುಗಾರರು ಮತ್ತು ಸ್ಥಳೀಯರಿಂದ ಬಾಲಕಿಗಾಗಿ ಸತತ ಹುಡುಕಾಟ ನಡೆಸಲಾಗಿತ್ತು. ಬಾಲಕಿಯು ಕಾಲ್ತೋಡು ಬಳಿ ಕಾಳುಸಂಕದಿಂದ ಕಾಲು ಜಾರಿ ಬಿದ್ದ ಸ್ಥಳದಲ್ಲೇ ಆಕೆಯ ಮೃತದೇಹ ಬುಧವಾರ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಅಂಗಾರ ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ:ಕುಂದಾಪುರ: ಕಾಲುಸಂಕ ದಾಟುವಾಗ ಹಳ್ಳಕ್ಕೆ ಬಿದ್ದು ನೀರುಪಾಲಾದ ಬಾಲಕಿ