ಕರ್ನಾಟಕ

karnataka

ETV Bharat / state

ಅವೈಜ್ಞಾನಿಕ ಕಾಮಗಾರಿಯಿಂದ ಗಂಗೊಳ್ಳಿ ಜೆಟ್ಟಿ ಕುಸಿತ: 10 ಕೋಟಿ ನೀರು ಪಾಲು - ಈಟಿವಿ ಭಾರತ ಕನ್ನಡ ನ್ಯೂಸ್​

ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಹೊಸ ಜೆಟ್ಟಿಯ ಅವೈಜ್ಞಾನಿಕ ಕಾಮಗಾರಿಯಿಂದ ಹಳೆಯ ಜೆಟ್ಟಿ ಕುಸಿದು ಬಿದ್ದು, ಹೊಸ ಜಟ್ಟಿಗೂ ಹಾನಿಯಾಗಿದೆ.

udupi-gangolli-fishing-jetty-collapsed
ಅವೈಜ್ಞಾನಿಕ ಕಾಮಗಾರಿಯಿಂದ ಗಂಗೊಳ್ಳಿ ಜೆಟ್ಟಿ ಕುಸಿತ : 10 ಕೋಟಿ ನೀರು ಪಾಲು

By

Published : Sep 29, 2022, 8:41 PM IST

ಉಡುಪಿ : ಸುಸಜ್ಜಿತ ಮೀನುಗಾರಿಕಾ ಜೆಟ್ಟಿ ನಿರ್ಮಾಣವಾಗಬೇಕೆಂಬುದು ಜಿಲ್ಲೆಯ ಗಂಗೊಳ್ಳಿಯ ಮೀನುಗಾರರ ಬಹುವರ್ಷದ ಬೇಡಿಕೆಯಾಗಿತ್ತು. ಈ ಬಗ್ಗೆ ಸುಸಜ್ಜಿತ ಜೆಟ್ಟಿ ನಿರ್ಮಾಣಕ್ಕೆಂದು ಸರ್ಕಾರದಿಂದ 12 ಕೋಟಿ ರೂ ಬಿಡುಗಡೆ ಆಗಿ, ಕಾಮಗಾರಿಯೂ ನಡೆಯುತ್ತಿದೆ. ಆದರೆ ಇಲ್ಲಿನ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಹಳೆ ಜಟ್ಟಿ ಮುರಿದು ಬಿದ್ದು ಹೊಸ ಜಟ್ಟಿಗೂ ಹಾನಿ ಉಂಟಾಗಿದೆ.

ಮುರಿದು ಬಿದ್ದ ಮೀನುಗಾರಿಕಾ ಜೆಟ್ಟಿ: ಜೆಟ್ಟಿ ಕುಸಿತದಿಂದ ಬೈಂದೂರಿನ ಗಂಗೊಳ್ಳಿಯ ಮೀನುಗಾರರು ಕಂಗೆಟ್ಟಿದ್ದಾರೆ. ಜೆಟ್ಟಿ ಎನ್ನುವುದು ಮೀನುಗಾರಿಕೆ ಮುಗಿದ ಬಳಿಕ ಮೀನುಗಳನ್ನು ಖಾಲಿ ಮಾಡಲು ಹಾಗೂ ಹಡಗು, ದೋಣಿಗಳನ್ನು ತಂದಿರಿಸುವ ಸ್ಥಳ. ಗಂಗೊಳ್ಳಿಯಲ್ಲಿ ಹಳೆ ಜೆಟ್ಟಿ ಇದ್ದು, ಇನ್ನು ಹೊಸದಾಗಿ ಜೆಟ್ಟಿ ನಿರ್ಮಿಸಲು 12 ಕೋಟಿ ರೂ ಮಂಜೂರಾಗಿತ್ತು.

ಈ ಹೊಸ ಜೆಟ್ಟಿ ಕಾಮಗಾರಿ ನಡೆಸುತ್ತಿರುವ ನಡುವೆಯೇ ಹಳೆ ಜಟ್ಟಿ ಕುಸಿದಿದೆ. ಇನ್ನು ಈ ಹಳೆ ಜಟ್ಟಿಗೆ ರಾಡ್‌ಗಳು ಆಧಾರವಾಗಿತ್ತು. ಈ ರಾಡ್‌ಗಳನ್ನು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಹೊಸ ಜೆಟ್ಟಿ ಕಾಮಗಾರಿ ವೇಳೆ ತುಂಡರಿಸಲಾಗಿತ್ತು. ಇದು ಹಳೆ ಜೆಟ್ಟಿ ಕುಸಿತಕ್ಕೆ ಕಾರಣವಾಗಿದೆ ಮೀನುಗಾರರು ಆರೋಪಿಸಿದ್ದಾರೆ.

ಕಾಮಗಾರಿಯಲ್ಲಿ ಕಮಿಷನ್ ಆರೋಪ : ಈ ಘಟನೆಗೆ ಪರ್ಸೆಂಟೇಜ್ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಇದಕ್ಕೆ ಮೀನುಗಾರು ಧ್ವನಿಗೂಡಿಸಿದ್ದಾರೆ. 12 ಕೋಟಿ ಕಾಮಗಾರಿಯಲ್ಲಿ ಇದುವರೆಗೆ 10ಕೋಟಿ 6 ಲಕ್ಷ ರೂ ಮಾತ್ರ ಪಾವತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಸ್ವಲ್ಪ ಮಾತ್ರ ಕಾಮಗಾರಿ ನಡೆದಿದ್ದು, ಈ 10 ಕೋಟಿ ಬಿಡುಗಡೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಜೊತೆಗೆ ಕಮಿಷನ್​ ಆರೋಪವೂ ಕೇಳಿಬಂದಿದೆ.

ಸೂಕ್ತ ಕ್ರಮಕೈಗೊಳ್ಳುವಂತೆ ಮೀನುಗಾರರ ಒತ್ತಾಯ : ಜೆಟ್ಟಿ ಕುಸಿತದ ಬಗ್ಗೆ ಜಿಲ್ಲಾಧಿಕಾರಿ ಕೂರ್ಮರಾವ್​ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಿ ವರದಿ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಹೊಸ ಜೆಟ್ಟಿ ನಿರ್ಮಾಣ ಆಗುವಷ್ಟರಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ತೊಡಕು ಉಂಟಾಗಿ, ಕಾಮಗಾರಿ ಮತ್ತಷ್ಟು ವಿಳಂಬವಾಗುವಂತಾಗಿದೆ. ಇದರಿಂದಾಗಿ ಮೀನುಗಾರರು ಪಕ್ಕದ ಮಲ್ಪೆ, ಭಟ್ಕಳ ಬಂದರು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೀನುಗಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ಕಾವೇರಿ ನದಿ ಪಾತ್ರದಿಂದ 273 ಟಿಎಂಸಿ ನೀರು ಸಮುದ್ರದ ಪಾಲು: ಸಚಿವ ಗೋವಿಂದ ಕಾರಜೋಳ

ABOUT THE AUTHOR

...view details