ಕರ್ನಾಟಕ

karnataka

ETV Bharat / state

ವಾತಾವರಣದ ವೈಪರೀತ್ಯಕ್ಕೆ ಸವಾಲೊಡ್ಡಿ ಕುಂಬಳ ಬೆಳೆದ ಯುವ ಕೃಷಿಕರು: ಬೆಂಬಲ ಬೆಲೆ ಸಿಗದೆ ಕಂಗಾಲು - ಉಡುಪಿಯಲ್ಲಿ ಕುಂಬಳಕಾಯಿ ಬೆಳೆ ಬೆಳೆದ ಯುವ ಕೃಷಿಕರು

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯುವ ಕೃಷಿಕರು ಹಸಿರು ಕುಂಬಳಕಾಯಿ ಬೆಳೆ ಬೆಳೆದಿದ್ದರು. ಆದರೆ ಅಕಾಲಿಕ ಮಳೆ ಪ್ರಭಾವದಿಂದಾಗಿ ಕುಂಬಳಕಾಯಿಗೆ ಹಳದಿ ರೋಗ ತಗುಲಿದ್ದು, ಅಂದುಕೊಂಡಷ್ಟು ಫಸಲು ಬಂದಿಲ್ಲ. ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ.

ಕುಂಬಳಕಾಯಿ ಬೆಳೆ
Pumpkin

By

Published : Feb 11, 2021, 9:58 AM IST

ಉಡುಪಿ: ಯಾವುದೇ ಸರ್ಕಾರ ಬಂದರೂ, ಏನೇ ಹೊಸ ಕಾಯ್ದೆ, ಕಾನೂನು ಬಂದರೂ ಕೃಷಿಕನ ಸಮಸ್ಯೆಗೆ ಮಾತ್ರ ಮುಕ್ತಿ ಇಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಜಿಲ್ಲೆಯ ಯುವ ಕೃಷಿಕರು ವಾತಾವರಣದ ವೈಪರೀತ್ಯಕ್ಕೆ ಸವಾಲೊಡ್ಡಿ ಬಂಪರ್ ಬೆಳೆ ತೆಗೆದರೂ ಸೂಕ್ತ ಮಾರುಕಟ್ಟೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೋವು ತೋಡಿಕೊಂಡ ಕೃಷಿಕರು

ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಕೋಡಿ ಕನ್ಯಾಣದ ಯುವ ಕೃಷಿಕರಾದ ಕೃಷ್ಣ ಪೂಜಾರಿ, ವಿಶ್ವನಾಥ ಪೂಜಾರಿ, ಶೇಖರ್ ಮರಕಾಲ, ರಾಜು ಪೂಜಾರಿ ಎಂಬ ಯುವ ಕೃಷಿಕರು ತಮ್ಮ ಹತ್ತು ಎಕರೆ ಜಮೀನಿನಲ್ಲಿ ಹಸಿರು ಕುಂಬಳಕಾಯಿ ಬೆಳೆದಿದ್ದಾರೆ. ಆದರೆ ಅಕಾಲಿಕ ಮಳೆಯಿಂದಾಗಿ ಪ್ರಭಾವದಿಂದಾಗಿ ಕುಂಬಳಕಾಯಿಗೆ ಹಳದಿ ರೋಗ ತಗುಲಿದ್ದು, ಅಂದುಕೊಂಡಷ್ಟು ಫಸಲು ಬಂದಿಲ್ಲ. ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ.

ಓದಿ: ಭಾಗ್ಯನಗರದಲ್ಲಿ ದುಷ್ಕೃತ್ಯ: ನಾಲ್ವರಿಂದ ಬಿ. ಫಾರ್ಮಸಿ ವಿದ್ಯಾರ್ಥಿನಿ ಕಿಡ್ನಾಪ್​, ಹತ್ಯೆ ಯತ್ನ!

ಸದ್ಯ ಬೆಳೆದ ಹಸಿರು ಕುಂಬಳಕಾಯಿ ಗದ್ದೆಯಲ್ಲೇ ಕೊಳೆಯುವ ಸ್ಥಿತಿಗೆ ಬಂದಿದ್ದು, ಇವುಗಳನ್ನು ಖರೀದಿಸಲು ಮಧ್ಯವರ್ತಿಗಳು ಬರುತ್ತಿದ್ದಾರೆ. ಆದರೆ ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ನ್ಯಾಯ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸೂಕ್ತ ಬೆಂಬಲ ಬೆಲೆ ಇಲ್ಲದ ಹಿನ್ನೆಲೆಯಲ್ಲಿ ಮಧ್ಯವರ್ತಿಗಳು ಮನಸ್ಸಿಗೆ ಬಂದ ಬೆಲೆಯಲ್ಲಿ ಕುಂಬಳಕಾಯಿ ಕೀಳುವ ಯೋಜನೆಯಲ್ಲಿದ್ದಾರೆ.

ಇತ್ತ ಕೃಷಿಕರು ನಷ್ಟಕ್ಕೆ ಸೂಕ್ತ ಬೆಲೆ ಇಲ್ಲದಂತಾಗಿರುವುದು ನೋವಿಗೆ ಕಾರಣವಾಗಿದೆ. ಇಂದಿನ ಮಾರುಕಟ್ಟೆ ವ್ಯವಸ್ಥೆಯಲ್ಲಿ ನೇರ ಮಾರುಕಟ್ಟೆಗೆ ಇಳಿಯೋ ಮನಸ್ಸು ಮಾಡಿದ್ದಾರೆ.‌ ಆದರೆ ಹತ್ತು ಎಕರೆಯಲ್ಲಿ ಬೆಳೆದ ಬೆಳೆಯನ್ನು ಕೆಲವೇ ದಿನಗಳಲ್ಲಿ ಖಾಲಿ ಮಾಡುವುದು ಕಷ್ಟವಾಗಿರುವ ಕಾರಣ ಸರ್ಕಾರ ಬೆಂಬಲ ಬೆಲೆ ನೀಡಿ ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details