ಕರ್ನಾಟಕ

karnataka

ETV Bharat / state

ಮೇ 3ರವೆರೆಗೆ ಲಾಕ್​ಡೌನ್​ ಕಟ್ಟುನಿಟ್ಟಾಗಿ ಪಾಲನೆ.. ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟನೆ - Udupi District Collector Jagdish

ಚಿನ್ನದ ಮಳಿಗೆಗಳು, ಸಲೂನ್ ಮತ್ತು ಬ್ಯೂಟಿ ಪಾರ್ಲರ್​​ಗಳಿಗೆ ಅವಕಾಶವಿಲ್ಲ. ಹೋಟೆಲ್​ಗಳಲ್ಲಿ ಪಾರ್ಸಲ್ ನೀಡಲು ಮಾತ್ರ ಅವಕಾಶವಿದೆ. ಗ್ರಾಮೀಣ ಪ್ರದೇಶದಲ್ಲಿ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶವಿದೆ.

asdd
ಉಡುಪಿ ಜಿಲ್ಲಾಧಿಕಾರಿ ಜಗದೀಶ್

By

Published : Apr 29, 2020, 11:10 AM IST

ಉಡುಪಿ :ಹಸಿರು ವಲಯವೆಂದು ಜನರು ಬೇಕಾಬಿಟ್ಟಿ ಓಡಾಡುವಂತಿಲ್ಲ. ಮೇ 3ರ ತನಕ ಜಿಲ್ಲೆಯಲ್ಲಿ ಲಾಕ್​ಡೌನ್ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಜಗದೀಶ್..

ವಿನಾಯತಿ ಇರುವವರು ಸಂಬಂಧಪಟ್ಟ ಪಾಸ್ ಜೊತೆಯಲ್ಲಿಟ್ಟುಕೊಂಡು ಓಡಾಡಬೇಕು. ಅನಗತ್ಯ ತಿರುಗಾಡುವವರ ಮೇಲೆ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಕಾನೂನು ಉಲ್ಲಂಘನೆ ಮಾಡುವುದು ಕಂಡುಬಂದ್ರೆ ಕೇಸ್ ಮಾಡಲಾಗುವುದು. ಚಿನ್ನದ ಮಳಿಗೆಗಳು, ಸಲೂನ್ ಮತ್ತು ಬ್ಯೂಟಿ ಪಾರ್ಲರ್​​ಗಳಿಗೆ ಅವಕಾಶವಿಲ್ಲ. ಹೋಟೆಲ್​ಗಳಲ್ಲಿ ಪಾರ್ಸಲ್ ನೀಡಲು ಮಾತ್ರ ಅವಕಾಶವಿದೆ. ಗ್ರಾಮೀಣ ಪ್ರದೇಶದಲ್ಲಿ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶವಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ,ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಪೂರೈಕೆ ಆರಂಭಗೊಳ್ಳಲಿದೆ. ಕಲ್ಲು, ಮರಳು, ಜಲ್ಲಿ ಮೊದಲಾದ ವಸ್ತುಗಳ ಪೂರೈಕೆ ನಡೆಯಲಿದೆ. ವ್ಯಾಪಾರ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದಾರೆ ಕೇಸ್​ ದಾಖಲಿಸುತ್ತೇವೆ. ಮಾಸ್ಕ್ ಸ್ಯಾನಿಟೈಸರ್ ಸರಿಯಾಗಿ ಬಳಸದೇ ಇರುವವರ ಮೇಲೆ ಕೇಸ್ ಬೀಳಲಿದೆ. ಸರ್ಕಾರ ಲಾಕ್​ಡೌನ್​ ಸಡಿಲ ಮಾಡಿರುವುದು ಆರ್ಥಿಕ ಪುನಶ್ಚೇತನಕ್ಕಾಗಿ ಮಾತ್ರ ಎಂದಿದ್ದಾರೆ.

ABOUT THE AUTHOR

...view details