ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ ಬೇಡ, ಉಡುಪಿ ಜಿಲ್ಲೆಯ ಜನ ಆತಂಕಗೊಳ್ಳಬೇಕಿಲ್ಲ.. ಡಿಸಿ ಜಿ ಜಗದೀಶ್‌ - ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್

ಕಾರ್ಕಳ ತಾಲೂಕು ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಯುವತಿಗೆ ಕಾಲೇಜಿಗೆ ರಜೆ ನೀಡಿದ ಕಾರಣ ಮಾರ್ಚ್ 14ರಂದು ಬಾದಾಮಿಗೆ ತೆರಳಿದ್ದರು. ಅಲ್ಲಿ ಮೇ 2ರಂದು ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

Udupi DC
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್

By

Published : May 7, 2020, 7:27 PM IST

ಉಡುಪಿ:ಕಳೆದ ಮಾರ್ಚ್ 2ನೇ ವಾರದಲ್ಲಿ ಉಡುಪಿ ಜಿಲ್ಲೆಯಿಂದ ತಮ್ಮ ಹುಟ್ಟೂರಾದ ಬಾಗಲಕೋಟೆಯ ಬಾದಾಮಿಗೆ ತೆರಳಿದ 19 ವರ್ಷದ ಯುವತಿಯೊಬ್ಬರಿಗೆ ಇಂದು ಕೊರೊನಾ ಸೋಂಕು ತಗುಲಿದ ವರದಿಯಾಗಿದೆ. ಆದರೆ, ಉಡುಪಿ ಜಿಲ್ಲೆಯ ಜನ ಯಾವುದೇ ರೀತಿಯಿಂದ ಆತಂಕಗೊಳ್ಳಬೇಕಿಲ್ಲ ಅಂತಾ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಕೊರೊನಾ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ..

ಈಕೆ ಮಾರ್ಚ್ ಎರಡನೇ ವಾರದಲ್ಲಿ ಉಡುಪಿಯಿಂದ ಅಲ್ಲಿಗೆ ತೆರಳಿರುವುದಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಮಾಹಿತಿ ನೀಡಿದ್ದಾರೆ. ಹೀಗಾಗಿ ಆಕೆಯ ಕೊರೊನಾ ಪಾಸಿಟಿವ್‌ ಉಡುಪಿಯಲ್ಲಿ ಯಾವುದೇ ಸಂಪರ್ಕ ಹೊಂದಿರುವ ಸಾಧ್ಯತೆ ಇಲ್ಲ. ಈ ಕಾರಣಕ್ಕಾಗಿ ಉಡುಪಿ ಜಿಲ್ಲೆಯ ಜನತೆ ಯಾವುದೇ ರೀತಿಯ ಆತಂಕಕ್ಕೊಳಗಾಗಬೇಕಾಗಿಲ್ಲ ಎಂದರು. ಕಾರ್ಕಳ ತಾಲೂಕು ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಯುವತಿಗೆ ಕಾಲೇಜಿಗೆ ರಜೆ ನೀಡಿದ ಕಾರಣ ಮಾರ್ಚ್‌ 14ರಂದು ಬಾದಾಮಿಗೆ ತೆರಳಿದ್ದರು. ಅಲ್ಲಿ ಮೇ 2ರಂದು ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. 23 ವರ್ಷದ ಗರ್ಭಿಣಿಯ ಸಂಪರ್ಕಕ್ಕೆ ಮೊದಲೇ ಬಂದಿದ್ದ ಈ ಯುವತಿ ಇಂದು ಪಾಸಿಟಿವ್ ಆಗಿದ್ದಾರೆ.

ಬಾದಾಮಿಯಲ್ಲಿ ಇಂದು ಕಂಡು ಬಂದ ಒಟ್ಟು 13 ಪಾಸಿಟಿವ್ ಪ್ರಕರಣಗಳಲ್ಲಿ 12 ಮಂದಿ ಈ ಗರ್ಭಿಣಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು. ಈಕೆ ಲಾಕ್‌ಡೌನ್‌ಗಿಂತ ಮೊದಲೇ ಉಡುಪಿಯಿಂದ ತೆರಳಿರುವುದರಿಂದ ಹಾಗೂ ಆಕೆಗೆ ಬಾದಾಮಿಯಲ್ಲೇ ತಮ್ಮ ಪಕ್ಕದ ಮನೆಯ ಯುವತಿಯ ಸಂಪರ್ಕದಿಂದ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಇದರಲ್ಲಿ ಉಡುಪಿಯ ಯಾವುದೇ ಪಾತ್ರವಿಲ್ಲ ಎಂದವರು ಹೇಳಿದರು.

ABOUT THE AUTHOR

...view details