ಉಡುಪಿ: ಜಿಲ್ಲಾಧಿಕಾರಿ ಹೆಸರಿನಲ್ಲಿ ಮೂರನೇ ಬಾರಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದ್ದು, ಉಡುಪಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಡಿಸಿ ಹೆಸರಿನಲ್ಲಿ 3ನೇ ಬಾರಿ ನಕಲಿ ಫೇಸ್ಬುಕ್ ಖಾತೆ, ಹಣಕ್ಕೆ ಬೇಡಿಕೆ - District Collector G.S. Jagdish
ಈ ಹಿಂದೆ ಎರಡು ಬಾರಿ ಡಿಸಿ ಉಡುಪಿ ಎಂಬ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಮೇ 31 ರಂದು ಮೂರನೇ ಬಾರಿ ನಕಲಿ ಫೇಸ್ಬುಕ್ ಖಾತೆ ತೆರೆದು, ಅದರಲ್ಲಿ ಪ್ರೊಫೈಲ್ ಗೆ ಜಿಲ್ಲಾಧಿಕಾರಿ ಜಿ. ಜಗದೀಶ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಲಾಗಿದೆ.
![ಉಡುಪಿ ಡಿಸಿ ಹೆಸರಿನಲ್ಲಿ 3ನೇ ಬಾರಿ ನಕಲಿ ಫೇಸ್ಬುಕ್ ಖಾತೆ, ಹಣಕ್ಕೆ ಬೇಡಿಕೆ udupi-dc-](https://etvbharatimages.akamaized.net/etvbharat/prod-images/768-512-12019691-thumbnail-3x2-jkh---copy.jpg)
ಉಡುಪಿ ಡಿಸಿ
ಈ ಹಿಂದೆ ಎರಡು ಬಾರಿ ಡಿಸಿ ಉಡುಪಿ ಎಂಬ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಮೇ 31 ರಂದು ಮೂರನೇ ಬಾರಿ ನಕಲಿ ಫೇಸ್ಬುಕ್ ಖಾತೆ ತೆರೆದು, ಅದರಲ್ಲಿ ಪ್ರೊಫೈಲ್ ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಲಾಗಿದೆ.
ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಹಣಕ್ಕೆ ಬೇಡಿಕೆ ಇಟ್ಟಿರುವ ಮಾಹಿತಿ ತಿಳಿಯುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿ ಈ ಕುರಿತು ಮಾಹಿತಿ ಹಂಚಿದ್ದಾರೆ. ಅಲ್ಲದೇ ಉಡುಪಿ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.