ಉಡುಪಿ: ಕೊರೊನಾ ನಿಯಂತ್ರಣ ಕುರಿತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ಎಚ್ಚರಿಕೆ ನೀಡಿದ ಆಡಿಯೋವೊಂದು ವೈರಲ್ ಆಗಿದೆ.
ಕಂದಾಯ ಇಲಾಖೆ ಅಧಿಕಾರಿಗಳಿಗೆ ಡಿಸಿ ಖಡಕ್ ಎಚ್ಚರಿಕೆ - G jagadish audio viral news
ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಸಹ ಜಾಸ್ತಿಯಾಗುತ್ತಿದೆ. ಸೀಲ್‌ಡೌನ್ ಮಾಡಿದ್ರೂ ಊರಲ್ಲಿ ಸಾವು ಸಂಭವಿಸುತ್ತಿರುವುದು ಸರಿಯಲ್ಲ. ಇನ್ಮುಂದೆ ಏರಿಯಾವನ್ನೇ ಸೀಲ್‌ಡೌನ್ ಮಾಡಬೇಕು..
![ಕಂದಾಯ ಇಲಾಖೆ ಅಧಿಕಾರಿಗಳಿಗೆ ಡಿಸಿ ಖಡಕ್ ಎಚ್ಚರಿಕೆ Jagadish](https://etvbharatimages.akamaized.net/etvbharat/prod-images/768-512-02:21:45:1595580705-kn-udp-04-24-dc-audio-viral-7202200-24072020140432-2407f-1595579672-1050.jpg)
ಎಸಿ, ತಹಶೀಲ್ದಾರ್, ವಿಲೇಜ್ ಅಕೌಂಟೆಂಟ್ ಮತ್ತು ಆರ್‌ಐಗಳೇ ಗಮನವಿಟ್ಟು ಕೇಳಿ, ನಾವು ಮಾಡುತ್ತಿರುವ ಕಂಟೇನ್ಮೆಂಟ್ ಝೋನ್ ಸರಿಯಾದ ಕ್ರಮದಲ್ಲಿಲ್ಲ. ಸದ್ಯ ಸಾಕಷ್ಟು ಸ್ಥಳೀಯ ಪ್ರಕರಣಗಳೇ ಬರುತ್ತಿವೆ. ಇನ್ಮುಂದೆ ಆ ಊರು ಅಥವಾ ಏರಿಯಾವನ್ನೇ ಕಂಟೇನ್ಮೆಂಟ್ ಮಾಡಬೇಕಾಗುತ್ತೆ. ಕೇವಲ ಒಂದೆರಡು ಮನೆ ಸೀಲ್‌ಡೌನ್ ಮಾಡಿದ್ರೆ ಸಾಕಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಸಹ ಜಾಸ್ತಿಯಾಗುತ್ತಿದೆ. ಸೀಲ್‌ಡೌನ್ ಮಾಡಿದ್ರೂ ಊರಲ್ಲಿ ಸಾವು ಸಂಭವಿಸುತ್ತಿರುವುದು ಸರಿಯಲ್ಲ. ಇನ್ಮುಂದೆ ಏರಿಯಾವನ್ನೇ ಸೀಲ್‌ಡೌನ್ ಮಾಡಬೇಕು. ಕಂಟೇನ್ಮೆಂಟ್ ಝೋನ್ ದೊಡ್ಡದು ಮಾಡಬೇಕು ಅಂತಾ ತುಂಬಾ ದಿನದಿಂದ ಹೇಳುತ್ತಿದ್ದೇನೆ. ಯಾರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗೆ ಮಾಡಿದ್ರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ ಆಡಿಯೋ ಸಖತ್ ವೈರಲ್ ಆಗಿದೆ.