ಉಡುಪಿ :ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ವಿಡಿಯೋ ಮೂಲಕ ಬೇಜವಾಬ್ದಾರಿತನದಿಂದ ಸೋಂಕನ್ನ ಸಮುದಾಯಕ್ಕೆ ಹರಡಿಸದಂತೆ ಜನರಿಗೆ ಮನವಿ ಮಾಡಿದ್ದಾರೆ.
ಕೊರೊನಾ ಸೋಂಕನ್ನು ಸಮುದಾಯಕ್ಕೆ ಹರಡಿಸಬೇಡಿ.. ಉಡುಪಿ ಡಿಸಿ ಮನವಿ - ಉಡುಪಿ ಡಿಸಿ ಕೊರೊನಾ ಜಾಗೃತಿ ಮನವಿ
ಹಿರಿಯ ಜೀವಗಳು ಕೊರೊನಾಗೆ ಹೆಚ್ಚಾಗಿ ಬಲಿಯಾಗುತ್ತಿದೆ. ಆದಷ್ಟು ಹಿರಿಯ ನಾಗರಿಕರನ್ನು ಸುರಕ್ಷಿತವಾಗಿ ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಿ. ಒಂದು ವೇಳೆ ಗುಣಲಕ್ಷಣಗಳು ಕಂಡು ಬಂದ್ರೆ ತಕ್ಷಣವೇ ಆಸ್ಪತ್ರೆಗೆ ಕರೆತರುವಂತೆ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ..
ಕೋವಿಡ್ ಲಕ್ಷಣಗಳು ಕಂಡು ಬಂದ್ರೆ ಅಥವಾ ಜ್ವರ, ನೆಗಡಿ, ಸೀತವಾದರೆ ಮನೆಯಲ್ಲಿ ಕಷಾಯ ಅಂತಾ ಕಾಲ ಕಳೆಯದೆ ರೋಗ ಮತ್ತಷ್ಟು ಉಲ್ಬಣಕ್ಕೆ ಎಡೆ ಮಾಡಿಕೊಡದೆ ಆಸ್ಪತ್ರೆಗೆ ಬರುವಂತೆ ಜನರಿಗೆ ತಿಳಿ ಹೇಳಿದ್ದಾರೆ. ಅಲ್ಲದೆ ಉಚಿತವಾಗಿ ಕೋವಿಡ್ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಜೀವಕ್ಕೆ ಕುತ್ತು ಬಂದಾಗ ಆಸ್ಪತ್ರೆಗೆ ಬರುವುದನ್ನು ಬಿಟ್ಟು ಮೊದಲೇ ಜಾಗೃತರಾಗುವಂತೆ ತಿಳಿಸಿದ್ದಾರೆ.
ಹಾಗೂ ಹಿರಿಯ ಜೀವಗಳು ಕೊರೊನಾಗೆ ಹೆಚ್ಚಾಗಿ ಬಲಿಯಾಗುತ್ತಿದೆ. ಆದಷ್ಟು ಹಿರಿಯ ನಾಗರಿಕರನ್ನು ಸುರಕ್ಷಿತವಾಗಿ ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಿ. ಒಂದು ವೇಳೆ ಗುಣಲಕ್ಷಣಗಳು ಕಂಡು ಬಂದ್ರೆ ತಕ್ಷಣವೇ ಆಸ್ಪತ್ರೆಗೆ ಕರೆತರುವಂತೆ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.