ಉಡುಪಿ: ಕೊರೊನಾ ಹೆಸರು ಕೇಳುತ್ತಿದ್ದಂತೆಯೇ ಭಯ ಪಡುವ ಜನರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಸೋಂಕು ದೃಢಪಟ್ಟಿದ್ದರೂ ಖುಷಿ ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದಾರೆ.
ಹೌದು.., ಜಿಲ್ಲೆಯ ಕೋಟದ ಹೋಟೆಲ್ ಮಾಲೀಕನೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಅವರು ತನ್ನ ಪತ್ನಿಗೆ ಆಸ್ಪತ್ರೆಯಿಂದಲೇ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.