ಉಡುಪಿಯಲ್ಲಿ ಮತ್ತೆರಡು ಪಾಸಿಟಿವ್ ಪ್ರಕರಣ: ಇಲ್ಲಿದೆ ಸೋಂಕಿತರ ಟ್ರಾವೆಲ್ ಡಿಟೇಲ್ಸ್.. - Udupi Corona positive case update
ಉಡುಪಿಯಲ್ಲಿ ಮತ್ತೆರಡು ಕೊರೊನಾ ಪಾಸಿಟಿವ್ ಕುರಿತು ಡಿಎಚ್ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.
ಉಡುಪಿ:ಜಿಲ್ಲೆಯಲ್ಲಿ ಮತ್ತೆರಡು ಕೊರೊನಾ ಪಾಸಿಟಿವ್ ಕುರಿತು ಉಡುಪಿ ಡಿಎಚ್ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ. ಈ ಕುರಿತು ಶಿವಮೊಗ್ಗ ಪ್ರಯೋಗಾಲಯದಿಂದ ಸೋಂಕಿತರ ವೈದ್ಯಕೀಯ ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ಕೇಸ್- 1:
ದುಬೈನಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್. ಕಾಪು ತಾಲೂಕಿನ ಮಣಿಪುರ ಗ್ರಾಮದ ಯುವಕ. ಮಾ.17 ಕ್ಕೆ ಉಡುಪಿಗೆ ಬಂದಿದ್ದ 35 ವರ್ಷದ ವ್ಯಕ್ತಿ. ಮಾ. 27 ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ.ಕೆಮ್ಮು, ಶೀತ, ನೆಗಡಿ ಲಕ್ಷಣವಿದೆ.
ಕೇಸ್-2:
ಕೇರಳಕ್ಕೆ ತೆರಳಿದ್ದ ಯುವಕನಿಗೆ ಸೋಂಕು. ವಿದೇಶ ಪ್ರಯಾಣ ಹಿನ್ನೆಲೆ ಇಲ್ಲದ ವ್ಯಕ್ತಿ. ಇಲೆಕ್ಟ್ರಿಕಲ್ ಕೆಲಸಕ್ಕೆ ತೆರಳಿದ್ದ 29 ವಯಸ್ಸಿನ ಯುವಕ. ತಿರುವನಂತಪುರಂನಲ್ಲಿ ಎಲೆಕ್ಟ್ರಿಕಲ್ ಕೆಲಸಕ್ಕೆ ಹೋಗಿದ್ದ ಯುವಕರ ತಂಡ. 31 ಜನ ಎಲೆಕ್ಟ್ರಿಷಿಯನ್ ಗಳು ಇದ್ದ ತಂಡ ಮಾ.26ರಂದು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲು. ಜ್ವರ, ಶೀತ, ನೆಗಡಿಯಿಂದ ಬಳಲುತ್ತಿರುವ ಯುವಕ.