ಉಡುಪಿ:ಉಡುಪಿಯ ನಗರಸಭೆ ಸದಸ್ಯನಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದು, ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಉಡುಪಿ ನಗರಸಭೆ ಸದಸ್ಯನಿಗೆ ಸೋಂಕು ದೃಢ: ಮತ್ತೊಂದು ಹೋಟೆಲ್ ಸೀಲ್ಡೌನ್! - ಹೋಟೆಲ್ ಸೀಲ್ಡೌನ್
ಕೊರೊನಾ ವೈರಸ್ ಹಿಟ್ ಲಿಸ್ಟಲ್ಲಿ ಈಗ ಹೋಟೆಲ್ಗಳು ಸಹ ಸೇರ್ಪಡೆ ಆಗುತ್ತಿವೆ. ಹೋಟೆಲ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಉಡುಪಿ ನಗದ ಪ್ರಸಿದ್ಧ ಮೀನು ಊಟದ ಹೋಟೆಲ್ ಸೀಲ್ಡೌನ್ ಮಾಡಲಾಗಿದೆ.
ಮಲ್ಪೆ ವಡಬಾಂಡೇಶ್ವರ ವಾರ್ಡ್ನ ನಗರಸಭೆ ಸದಸ್ಯನಿಗೆ ಸೋಂಕು ತಗುಲಿದ್ದು, ಕೆಲದಿನಗಳ ಹಿಂದೆಯಷ್ಟೇ ಇವರ ಸಂಬಂಧಿ ಯುವಕನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೊನಾ ವೈರಸ್ ಹಿಟ್ ಲಿಸ್ಟಲ್ಲಿ ಈಗ ಹೋಟೆಲ್ಗಳು ಸಹ ಸೇರ್ಪಡೆ ಆಗುತ್ತಿವೆ. ಹೋಟೆಲ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗದ ಪ್ರಸಿದ್ಧ ಮೀನು ಊಟದ ಹೋಟೆಲ್ ಸೀಲ್ಡೌನ್ ಮಾಡಲಾಗಿದೆ.
ಹೋಟೆಲ್ಗೆ ತೆರಳಿದ್ದ ಗ್ರಾಹಕರಲ್ಲಿ ಆತಂಕ ಮನೆಮಾಡಿದೆ. ಒಂದು ವಾರದಲ್ಲಿ ಜಿಲ್ಲೆಯ ಮೂರು ಹೋಟೆಲ್ಗಳು ಸೀಲ್ಡೌನ್ ಮಾಡಿದಂತಾಗಿದೆ. ಇದರಿಂದ ಸ್ಥಳೀಯರಲ್ಲಿ ಕೊರೊನಾ ವೈರಸ್ ಸಮುದಾಯಕ್ಕೂ ಹಬ್ಬುತ್ತಿದ್ದೆಯಾ ಎಂಬ ಆತಂಕ ಶುರುವಾಗಿದೆ.