ಉಡುಪಿ:ಕೊರೊನಾ ಕಾರಣದಿಂದ ಅದ್ಧೂರಿ ಗಣೇಶ ಹಬ್ಬದ ಬದಲಾಗಿ ನಾಡಿನೆಲ್ಲೆಡೆ ಸರಳವಾಗಿಯೇ ಗಣೇಶ ಚತುರ್ಥಿ ಆಚರಿಸಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸರಳ, ಪರಿಸರಸ್ನೇಹಿ ಗಣೇಶ ಚತುರ್ಥಿ ಆಚರಿಸಲು ಉಡುಪಿ ಜನರ ಸಿದ್ಧತೆ - ಗಣೇಶ ಚತುರ್ಥಿ ಆಚರಿಸಲು ಉಡುಪಿ ಜನರ ಸಿದ್ದತೆ
ಕೊರೊನಾ ಕಾರಣದಿಂದ ಈ ಬಾರಿ ವಿಗ್ರಹಗಳಿಗೂ ಬೇಡಿಕೆ ಇಲ್ಲ. ನಾವು ಕೂಡ ಬೇಡಿಕೆಗೆ ಅನುಗುಣವಾಗಿ ಸಣ್ಣ ಗಾತ್ರದ ಗಣಪತಿಗಳನ್ನೇ ಈ ಬಾರಿ ತಯಾರು ಮಾಡಿದ್ದೇವೆ ಎನ್ನುತ್ತಾರೆ ಉಡುಪಿಯ ಗಣೇಶ ವಿಗ್ರಹ ತಯಾರಕ ವಿಠಲ ಮಾಸ್ಟರ್.
![ಸರಳ, ಪರಿಸರಸ್ನೇಹಿ ಗಣೇಶ ಚತುರ್ಥಿ ಆಚರಿಸಲು ಉಡುಪಿ ಜನರ ಸಿದ್ಧತೆ Udupi celebrate simple, eco-friendly Ganesh Chaturthi](https://etvbharatimages.akamaized.net/etvbharat/prod-images/768-512-8472440-thumbnail-3x2-nin.jpg)
ಪ್ರತೀ ವರ್ಷ ಅದ್ಧೂರಿ ಆಚರಣೆ ನಡೆಸುವ ಕೃಷ್ಣನೂರು ಉಡುಪಿ ಜಿಲ್ಲೆಯಲ್ಲೂ ಜನರು ತಮ್ಮ ತಮ್ಮ ಮನೆ, ಗಣೇಶ ದೇವಸ್ಥಾನಗಳಲ್ಲಿ ಗಣಪತಿ ಪೂಜೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಣೇಶ ವಿಗ್ರಹ ತಯಾರಿಕೆಯಲ್ಲೂ ದೊಡ್ಡ ಗಣಪತಿಯ ಬದಲಾಗಿ ಸಣ್ಣ ಸಣ್ಣ ಗಾತ್ರದ ಗಣಪತಿಗಳೇ ತಯಾರಾಗುತ್ತಿವೆ. ದೊಡ್ಡ ಗಾತ್ರದ ಗಣಪತಿಗೆ ಕೊರೊನಾ ಹಿನ್ನೆಲೆಯಲ್ಲಿ ಬೇಡಿಕೆ ಇಲ್ಲ. ಎಲ್ಲರೂ ಮನೆಯಲ್ಲಿ ಇಡುವುದಕ್ಕೆ ಸಾಕಾಗುವ ಚಿಕ್ಕ ಗಾತ್ರದ ಗಣಪತಿ ಮೂರ್ತಿ ಮಾಡಿಕೊಡುವಂತೆ ಕೇಳುತ್ತಿದ್ದಾರೆ.
ಕೊರೊನಾ ಕಾರಣದಿಂದ ಈ ಬಾರಿ ವಿಗ್ರಹಗಳಿಗೂ ಬೇಡಿಕೆ ಇಲ್ಲ. ನಾವು ಕೂಡ ಬೇಡಿಕೆಗೆ ಅನುಗುಣವಾಗಿ ಸಣ್ಣ ಗಾತ್ರದ ಗಣಪತಿಗಳನ್ನೇ ಈ ಬಾರಿ ತಯಾರು ಮಾಡಿದ್ದೇವೆ ಎನ್ನುತ್ತಾರೆ ಉಡುಪಿಯ ಗಣೇಶ ವಿಗ್ರಹ ತಯಾರಕ ವಿಠಲ ಮಾಸ್ಟರ್.. ಮನೆಯಲ್ಲೇ ಈ ಬಾರಿ ಗಣೇಶ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಜಿಲ್ಲೆಯಲ್ಲಿ ಪರಿಸರ ಗಣಪತಿಗೆ ಹೆಚ್ಚಿನ ಬೇಡಿಕೆ ಇದೆ. ಯಾವುದೇ ಬಣ್ಣ ಬಳಸದೆ ಕೇವಲ ಮಣ್ಣಿನಿಂದಲೇ ತಯಾರು ಮಾಡುವ ಪರಿಸರಸ್ನೇಹಿ ಗಣೇಶನತ್ತ ಜನರ ಒಲವು ಹೆಚ್ಚಿದೆ.