ಉಡುಪಿ :ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಗಾಯಾಳು ಹೆದ್ದಾರಿಯ ಮಧ್ಯದಲ್ಲಿ ರಕ್ತದ ಮಡುವಿನಲ್ಲಿ ಕುಳಿತು ನರಳಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆ ಅಪಘಾತ.. ಆ್ಯಂಬುಲೆನ್ಸ್‌ಗಾಗಿ ನಡುರಸ್ತೆಯಲ್ಲಿ ಕುಳಿತ ಗಾಯಾಳು.. ವಿಡಿಯೋ ವೈರಲ್.. - ಉಡುಪಿ ಬ್ರಹ್ಮಾವರ ಭೀಕರ ರಸ್ತೆ ಅಪಘಾತ ವಿಡಿಯೋ
ಆ್ಯಂಬುಲೆನ್ಸ್ ಬರುವಿಕೆಗಾಗಿ ಹೆದ್ದಾರಿಯಲ್ಲಿ ಕುಳಿತ ಗಾಯಾಳುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಈ ಅಪಘಾತಕ್ಕೆ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
![ರಸ್ತೆ ಅಪಘಾತ.. ಆ್ಯಂಬುಲೆನ್ಸ್‌ಗಾಗಿ ನಡುರಸ್ತೆಯಲ್ಲಿ ಕುಳಿತ ಗಾಯಾಳು.. ವಿಡಿಯೋ ವೈರಲ್.. udupi brahmavar bike and lorry accident viral video](https://etvbharatimages.akamaized.net/etvbharat/prod-images/768-512-12958398-thumbnail-3x2-jkdjkdd.jpg)
ರಸ್ತೆ ಅಪಘಾತ
ಆ್ಯಂಬುಲೆನ್ಸ್‌ಗಾಗಿ ನಡುರಸ್ತೆಯಲ್ಲೇ ಕುಳಿತ ಗಾಯಾಳು
ಬ್ರಹ್ಮಾವರ ಬಸ್ ನಿಲ್ದಾಣದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ಗೆ ಲಾರಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸ್ಕೂಟರ್ ಸವಾರ ಸ್ಥಳೀಯ ವ್ಯಾಪಾರಿ ಚಂದಯ್ಯ ಎಂಬುವರ ಕಾಲಿನ ಮೇಲೆ ಲಾರಿ ಹರಿದ ಪರಿಣಾಮ ಎಡಗಾಲು ನುಜ್ಜುನುಜ್ಜಾಗಿತ್ತು.
ಆ್ಯಂಬುಲೆನ್ಸ್ ಬರುವಿಕೆಗಾಗಿ ಹೆದ್ದಾರಿಯಲ್ಲಿ ಕುಳಿತ ಗಾಯಾಳುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಈ ಅಪಘಾತಕ್ಕೆ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.