ಕರ್ನಾಟಕ

karnataka

ETV Bharat / state

'ಕೌನ್‌ ಬನೇಗಾ ಕರೋಡ್‌ಪತಿ'ಯಲ್ಲಿ ಅವಕಾಶ ಪಡೆದ ಉಡುಪಿಯ ಬಾಲಕ - ಉಡುಪಿ ಲೇಟೆಸ್ಟ್​ ನ್ಯೂಸ್

ಉಡುಪಿಯ ಅನಾಮಯ ಯೋಗೇಶ್ ದಿವಾಕರ್ ಎಂಬ ಬಾಲಕ ಹಿಂದಿಯ ಜನಪ್ರಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾನೆ.

ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅವಕಾಶ ಪಡೆದ ಉಡುಪಿ ಬಾಲಕ
Udupi district boy got chance in Kaun Banega Karodpati program

By

Published : Dec 12, 2020, 3:56 PM IST

ಉಡುಪಿ:ಜನಪ್ರಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ (ಕೆಬಿಸಿ) ಭಾಗವಹಿಸುವ ಅವಕಾಶ ಸಿಕ್ಕಿದ್ರೆ ಯಾರು ಬೇಡ ಅಂತಾರೆ ಹೇಳಿ?, ಹೌದು. ಅಂತಹದೊಂದು ಅವಕಾಶವನ್ನು ಜಿಲ್ಲೆಯ ಬಾಲಕನೋರ್ವ ಪಡೆದುಕೊಂಡಿದ್ದಾನೆ.

ಉಡುಪಿಯ ಅನಾಮಯ ಯೋಗೇಶ್ ದಿವಾಕರ್ ಈ ಅವಕಾಶ ಪಡೆದ ಅದೃಷ್ಟವಂತ ಬಾಲಕ. ಈತ ಇಲ್ಲಿನ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ಏಳನೇ ತರಗತಿ ಓದುತ್ತಿದ್ದಾನೆ. ವಿದ್ಯಾರ್ಥಿಗಳಿಗೆಂದೇ ಈ ತಿಂಗಳ 14ರಿಂದ 17 ರವರೆಗೆ ಕೆಬಿಸಿಯ ವಿಶೇಷ ಸಂಚಿಕೆ ಬರಲಿದ್ದು, ಅದರಲ್ಲಿ ಭಾಗವಹಿಸುವುದಕ್ಕಾಗಿ ದೇಶಾದ್ಯಂತ ಸ್ಪರ್ಧೆ ಏರ್ಪಡಿಸಲಾಗಿತ್ತು.

ಓದಿ: ಬೆಂಗಳೂರಿನಲ್ಲಿ ರಜನಿ ಓದಿದ ಶಾಲೆ ಮುಂದೆ 'ತಲೈವಾ' ಬರ್ತ್​​ ಡೇ ಆಚರಣೆ

ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಕೇವಲ ಎಂಟು ಮಕ್ಕಳು ಮಾತ್ರ ಆಯ್ಕೆಯಾಗಿದ್ದು, ದಿವಾಕರ್‌ಗೆ ಸ್ಥಾನ ಸಿಕ್ಕಿದೆ. ಈ ಕಾರ್ಯಕ್ರಮ ಸೋನಿ ಟಿವಿಯಲ್ಲಿ ಡಿ.14ರಿಂದ 17ರವರೆಗೆ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ.

ABOUT THE AUTHOR

...view details