ಉಡುಪಿ:ದೆಹಲಿಯಲ್ಲಿ ಇತ್ತೀಚೆಗೆ ನಡೆದಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಚಾಂಪಿಯನ್ ಶಿಪ್ನ ಜಾವಲಿನ್ ಥ್ರೋ ವಿಭಾಗದಲ್ಲಿ ಉಡುಪಿಯ ಕರೀಶ್ಮಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿವಾಸಿಯಾಗಿರುವ ಕರೀಶ್ಮಾ, ರಾಯಚೂರಿನ ಎಲ್ವಿಡಿ ಕಾಲೇಜಿನಲ್ಲಿ ಬಿಎಸ್ಸಿ ಅಂತಿಮ ವರ್ಷದ ಪದವಿ ಓದುತ್ತಿದ್ದಾರೆ.
ದೆಹಲಿ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಉಡುಪಿಯ ಕುವರಿ 23 ವರ್ಷದ ವಯೋಮಿತಿ ಒಳಗಿನ ಮೊದಲ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕರೀಶ್ಮಾ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡಾಪಟು ಕರೀಶ್ಮಾ, ಸುದರ್ಶನ್ ಅನಿಲ್ ಮತ್ತು ಇಂದಿರಾ ದಂಪತಿಯ ಪುತ್ರಿ.
ವಿಶೇಷ ಅಂದರೆ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ನೀರಜ್ ಚೋಪ್ರಾ ಅವರ ಕೋಚ್ ಕಾಶಿನಾಥ್ ನಾಯಕ್ ಈಕೆಗೂ ಆನ್ಲೈನ್ ಟ್ರೈನಿಂಗ್ ಕೊಡುತ್ತಿದ್ದಾರೆ. ದೆಹಲಿ ಚಾಂಪಿಯನ್ ಶಿಪ್ನಲ್ಲಿ ಕರೀಶ್ಮಾ ಸನಿಲ್ 46.52 ಮೀಟರ್ ದೂರ ಜಾವಲಿನ್ ಎಸೆದು ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:NEPಗೆ ಬೆಂಬಲ.. ಮಂಗಳೂರಿನ ಸರ್ಕಾರಿ ಕಚೇರಿ ಗೋಡೆಗಳ ಮೇಲೆ ಮೂಡಿವೆ ರಂಗಿನ ಚಿತ್ತಾರಗಳು