ಉಡುಪಿ:ಗಣೇಶೋತ್ಸವ ನಿಮಜ್ಜನ ಮೆರವಣಿಗೆ ವೇಳೆ ಹುಲಿ ವೇಷ ತಂಡದ ವಾಹನ ಪಲ್ಟಿಯಾಗಿ ಒಬ್ಬ ಹುಲಿ ವೇಷಧಾರಿ ಮೃತಪಟ್ಟ ಘಟನೆ ಜಿಲ್ಲೆಯ ನೇಜಾರಿನಲ್ಲಿ ನಡೆದಿದೆ.
ಗಣೇಶ ನಿಮಜ್ಜನಕ್ಕೆ ತೆರಳುವಾಗ ಹುಲಿ ವೇಷಧಾರಿಗಳ ವಾಹನ ಪಲ್ಟಿ: ಒಬ್ಬ ಸಾವು ಇಬ್ಬರ ಸ್ಥಿತಿ ಗಂಭೀರ - Udupi News
ಗಣೇಶ ನಿಮಜ್ಜನ ವೇಳೆ ಹುಲಿ ವೇಷಧಾರಿ ತಂಡದ ವಾಹನ ಪಲ್ಟಿಯಾದ ಘಟನೆ ಉಡುಪಿಯ ನೇಜಾರಿನಲ್ಲಿ ನಡೆದಿದೆ.
ಹುಲಿ ವೇಷಧಾರಿಗಳ ವಾಹನ ಪಲ್ಟಿ
ಟೆಂಪೊವೊಂದರಲ್ಲಿ ಹದಿನೈದುಕ್ಕೂ ಅಧಿಕ ಹುಲಿ ವೇಷಧಾರಿಗಳು ನೇಜಾರಿನಿಂದ ಸಂತೆ ಕಟ್ಟೆಗೆ ಬರುವ ಸಂದರ್ಭ, ನೇಜಾರು ಆಟದ ಮೈದಾನದ ಬಳಿ ಟೆಂಪೊ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಪಡುಬಿದ್ರೆ ಹುಲಿ ವೇಷ ತಂಡದ ಯುವಕ ಸುಮಂತ (22) ಮೃತಪಟ್ಟಿದ್ದಾರೆ. ತಂಡದಲ್ಲಿ ಹನ್ನೆರಡು ಜನ ವೇಷಧಾರಿಗಳಿದ್ದು, 5 ಜನ ವೇಷಧಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ, ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.