ಕರ್ನಾಟಕ

karnataka

ETV Bharat / state

ಸೆ.28 ಕರ್ನಾಟಕ ಬಂದ್​ಗೆ ಉಡುಪಿ ಜಿಲ್ಲೆಯ 14ಸಂಘಟನೆಗಳು ಸಾಥ್ - ಸೆ.28 ಕರ್ನಾಟಕ ಬಂದ್​ಗೆ ಉಡುಪಿ ಜಿಲ್ಲೆಯ 14ಸಂಘಟನೆಗಳು ಸಾಥ್

ಕಾರ್ಪೊರೇಟ್ ‌ಕಂಪೆನಿಗಳ ಪರವಾದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತು ಕಾಯ್ದೆ ತಿದ್ದುಪಡಿ, ವಿದ್ಯುತ್ ಹಾಗೂ ಕಾರ್ಮಿಕ‌ ವಿರೋಧಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ರೈತರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸುವಂತೆ ಒತ್ತಾಯಿಸಿದರು.

udupi-14-organizations-supporting-to-karnataka-bund
ಉಡುಪಿ

By

Published : Sep 26, 2020, 10:16 PM IST

ಉಡುಪಿ:ರಾಜ್ಯ ರೈತ ಸಂಘಟನೆಗಳು ಕರೆ ಕೊಟ್ಟ ಕರ್ನಾಟಕ ಬಂದ್​ಗೆ ಉಡುಪಿ ಜಿಲ್ಲೆಯ 14ಸಂಘಟನೆಗಳು ಸಾಥ್ ನೀಡಿವೆ.‌ ರೈತರ ಪರವಾಗಿ ವಿವಿಧ ಸಂಘಟನೆಗಳ 500ಕ್ಕೂ ಹೆಚ್ಚು ಕಾರ್ಯಕರ್ತರು ರಸ್ತೆಗಿಳಿಯಲಿದ್ದಾರೆ ಎಂದು ಸಿಪಿಐಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ‌ ಅವರು, ಕಾರ್ಪೊರೇಟ್ ‌ಕಂಪೆನಿಗಳ ಪರವಾದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತು ಕಾಯ್ದೆ ತಿದ್ದುಪಡಿ, ವಿದ್ಯುತ್ ಹಾಗೂ ಕಾರ್ಮಿಕ‌ ವಿರೋಧಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ರೈತರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸುವಂತೆ ಒತ್ತಾಯಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸಿಪಿಐಎಂ ಮುಖಂಡ ಬಾಲಕೃಷ್ಣ ಶೆಟ್ಟಿ

ಜಿಲ್ಲೆಯ ಕಾರ್ಮಿಕರು, ವ್ಯಾಪಾರಿಗಳು, ಬಸ್ ಮಾಲೀಕರು, ನೌಕರರು ಬಂದ್​ಗೆ ಬೆಂಬಲಿಸುವಂತೆ ಮನವೊಲಿಸುತ್ತೇವೆ. ಈ ಬಂದ್ ಮೂಲಕ ರೈತರ ಜೊತೆ ನಿಂತು ‌ಎಚ್ಚರಿಕೆ ನೀಡಬೇಕಿದೆ ಎಂದರು.

ABOUT THE AUTHOR

...view details