ಉಡುಪಿ: ನಗರಸಭೆ ಮತ್ತು ಬೀಚ್ ಸಮಿತಿ ವತಿಯಿಂದ ಪ್ರವಾಸಿಗರಿಗೋಸ್ಕರ ಮಲ್ಪೆ ಬೀಚ್ನಲ್ಲಿ ಎರಡು ದಿನಗಳ ಕಾಲ ಬೀಚ್ ಉತ್ಸವ ಆಯೋಜಿಸಲಾಗಿದೆ.
ಪ್ರವಾಸಿಗರಿಗಾಗಿ ಮಲ್ಪೆಯಲ್ಲಿ ಎರಡು ದಿನ ಬೀಚ್ ಉತ್ಸವ... ಡಾಗ್ ಶೋ, ಸ್ಯಾಂಡ್ ಆರ್ಟ್ ಹೈಲೈಟ್ - ಎರಡು ದಿನಗಳ ಬೀಚ್ ಉತ್ಸವ
ಸದಾ ಬ್ಯುಸಿಯಾಗಿರೋ ಮಲ್ಪೆ ಬೀಚ್ನಲ್ಲಿ ಜನಜಂಗುಳಿ ಇನ್ನೂ ಹೆಚ್ಚಾಗಿದೆ. ಪ್ರವಾಸಿಗರಲ್ಲದೇ ಸ್ಥಳೀಯರು ಕೂಡ ಸೇರುತ್ತಿದ್ದಾರೆ. ಮಲ್ಪೆ ಬೀಚ್ನಲ್ಲಿ ಬೀಚ್ ಉತ್ಸವ ನಡೆಯುತ್ತಿದ್ದು, ಪ್ರವಾಸಿಗರಿಗೋಸ್ಕರ ಏರ್ಪಡಿಸಿರುವ ಕಾರ್ಯಕ್ರಮಗಳು ಉತ್ಸವಕ್ಕೆ ಮೆರುಗು ತಂದಿವೆ.
![ಪ್ರವಾಸಿಗರಿಗಾಗಿ ಮಲ್ಪೆಯಲ್ಲಿ ಎರಡು ದಿನ ಬೀಚ್ ಉತ್ಸವ... ಡಾಗ್ ಶೋ, ಸ್ಯಾಂಡ್ ಆರ್ಟ್ ಹೈಲೈಟ್ ಬೀಚ್ ಉತ್ಸವ](https://etvbharatimages.akamaized.net/etvbharat/prod-images/768-512-5936734-thumbnail-3x2-dfgdh.jpg)
ಮಲ್ಪೆ ಬೀಚ್ನಲ್ಲಿ ಎರಡು ದಿನಗಳ ಕಾಲ ಬೀಚ್ ಉತ್ಸವ ನಡೆಯುತ್ತಿದ್ದು, ಉತ್ಸವದಲ್ಲಿ ಡಾಗ್ ಶೋ ಏರ್ಪಡಿಸಲಾಗಿದೆ. ಇದರಲ್ಲಿ ಡಾಬರ್ ಮೆನ್, ಜರ್ಮನ್ ಶೆಫರ್ಡ್, ಲ್ಯಾಬ್ರೋಡಾರ್, ಗೋಲ್ಡನ್ ರಿಟ್ರೀವರ್ನಂತಹ ಆಳೆತ್ತರದ ವಿವಿಧ ತಳಿಯ ನಾಯಿಗಳು ಪ್ರವಾಸಿಗರ ಗಮನ ಸೆಳೆದಿವೆ.
ಇದಲ್ಲದೆ ಕಡಲ ಮಣ್ಣಿನಲ್ಲಿ ಬಿಡಿಸಿದ ಸ್ವಚ್ಛ ಭಾರತ್, ಭೂತ ಕೋಲ, ತುಳುನಾಡಿನ ಅವಳಿವೀರರು ಕೋಟಿ ಚೆನ್ನಯ್ಯರ ಸ್ಪೆಶಲ್ ಸ್ಯಾಂಡ್ ಆರ್ಟ್ಸ್ ಬೀಚ್ ಉತ್ಸವಕ್ಕೆ ಮೆರಗು ಮೂಡಿಸಿತ್ತು. ಇನ್ನು ಯುವಕ - ಯುವತಿಯರಿಗಾಗಿ ವಾಲಿಬಾಲ್, ಥ್ರೋಬಾಲ್ ಇನ್ನಿತರ ಸ್ಪರ್ಧೆ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗದಿಂದ ಬಂದ ಯುವಜನತೆ ಕ್ರೀಡೆಯಲ್ಲಿ ಭಾಗವಹಿಸಿದರು. ಉಳಿದಂತೆ ಗಾಳಿಪಟ ಉತ್ಸವವನ್ನು ಕೂಡಾ ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು.