ಕರ್ನಾಟಕ

karnataka

ETV Bharat / state

ಬೃಹತ್​ ಗಾತ್ರದ ಎರಡು ತೊರಕೆ ಮೀನುಗಳು ಬಲೆಗೆ...ಈ ಸ್ಟಿಂಗ್​ನರಿ ಫಿಶ್​ನ ತೂಕವೆಷ್ಟು ಗೊತ್ತಾ!? - ಮಲ್ಪೆಯಲ್ಲಿ ಬಲೆಗೆ ಬಿದ್ದ ಎರಡು ತೊರಕೆ ಮೀನುಗಳು,

ಬೃಹತ್​ ಆಕಾರದ ಎರಡು ತೊರಕೆ ಮೀನುಗಳು ಬಲೆಗೆ ಬಿದ್ದಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಬಂದರ್​ನಲ್ಲಿ ನಡೆದಿದೆ.

Two Big stingray fish, Two Big stingray fish Captured, Two Big stingray fish Captured in Malpe sea, stingray fish, stingray fish news, ಬಲೆಗೆ ಬಿದ್ದ ಎರಡು ತೊರಕೆ ಮೀನುಗಳು, ಮಲ್ಪೆಯಲ್ಲಿ ಬಲೆಗೆ ಬಿದ್ದ ಎರಡು ತೊರಕೆ ಮೀನುಗಳು, ತೊರಕೆ ಮೀನುಗಳು, ತೊರಕೆ ಮೀನುಗಳು ಸುದ್ದಿ,
ಬೃಹತ್​ ಆಕಾರದ ಎರಡು ತೊರಕೆ ಮೀನುಗಳು ಬಲೆಗೆ

By

Published : Oct 21, 2020, 3:31 PM IST

ಉಡುಪಿ:ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೃಹತ್ ಬೇಟೆ ನಡೆದಿದೆ. ಭಾರಿ ಗಾತ್ರದ ಎರಡು ತೊರಕೆ ಮೀನುಗಳು ಮೀನುಗಾರರ ಬಲೆಗೆ ಬಿದ್ದಿವೆ.

ಬೃಹತ್​ ಆಕಾರದ ಎರಡು ತೊರಕೆ ಮೀನುಗಳು ಬಲೆಗೆ

ಒಂದು ಮೀನು 750 ಕೆ.ಜಿ. ಹಾಗೂ ಇನ್ನೊಂದು 250 ಕೆ.ಜಿ. ತೂಗುತ್ತಿದೆ. ಮಲ್ಪೆ ಸುಭಾಸ್ ಸಾಲಿಯಾನ್ ಅವರ ಮಾಲೀಕತ್ವದ ನಾಗಸಿದ್ಧಿ ದೋಣಿಯ ಬಲೆಗೆ ಬಿದ್ದ ಈ ಮೀನುಗಳನ್ನು ಕ್ರೇನ್ ಮೂಲಕ ಇಳಿಸಲಾಯಿತು.

ತೊರಕೆ ಮೀನು ತುಂಬಾ ರುಚಿಕರವಾಗಿದ್ದು, ವಿದೇಶಗಳಿಗೆ ರಫ್ತಾಗುತ್ತದೆ. ಬೃಹತ್‌ ಗಾತ್ರದ ಈ ಮೀನು ಮತ್ಸ್ಯಪ್ರಿಯರ ಬಾಯಿಯಲ್ಲಿ ನೀರಿಗಿಳಿಯುವಂತೆ ಮಾಡಿದೆ. ತುಳು ಭಾಷೆಯಲ್ಲಿ ಇದನ್ನು ಕೊಂಬು ತೊರಕೆ ಎನ್ನುತ್ತಾರೆ.

ಕಳೆದ ವರ್ಷ ಮಲ್ಪೆಯಲ್ಲಿ 1.2 ಟನ್ ತೂಕದ ಭಾರಿ ಗಾತ್ರದ ಮೀನು ಬಲೆಗೆ ಬಿದ್ದಿತ್ತು. ಈ ಬಾರಿ ಸದ್ಯ ಬುಧವಾರ ಬಂದರಿಗೆ ಬಂದ ತೊರಕೆ ಮೀನು ಬೃಹತ್ ಗಾತ್ರದ್ದಾಗಿದೆ. ಹಾಗಾಗಿ ಈ ಮೀನನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

ABOUT THE AUTHOR

...view details