ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಹಿಜಾಬ್‌, ಕೇಸರಿ ಶಾಲು ಪ್ರತಿಭಟನೆ : ಮಾರಕ ಆಯುಧಗಳೊಂದಿಗೆ ಬಂದಿದ್ದ ಇಬ್ಬರ ಬಂಧನ - ಹಿಜಾಬ್​ ಪ್ರತಿಭಟನೆ ವೇಳೆ ಮಾರಕಾಸ್ತ್ರ ತಂದ ಇಬ್ಬರ ಬಂಧನ

ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಒಂದು ಗುಂಪಿನ ವಿದ್ಯಾರ್ಥಿಗಳ ಪರವಾಗಿ 5-6 ವ್ಯಕ್ತಿಗಳು ಮಾರಕಾಯುಧಗಳೊಂದಿಗೆ ಆಗಮಿಸಿದ್ದರು. ಯಾವುದೇ ಸಮಯದಲ್ಲಾದರೂ, ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುವ ಮಾಹಿತಿ ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ..

two-arrested-who-came-with-weapons-in-hijab-and-shawl-protest
ಉಡುಪಿಯಲ್ಲಿ ಹಿಜಾಬ್‌, ಶಾಲು ಪ್ರತಿಭಟನೆ

By

Published : Feb 5, 2022, 9:58 PM IST

ಉಡುಪಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎದುರು ರಸ್ತೆಯಲ್ಲಿ ಶುಕ್ರವಾರ ಹಿಜಾಬ್ ಹಾಗೂ ಕೇಸರಿ ಶಾಲು ಧಾರಣೆಯ ವಿಚಾರದಲ್ಲಿ ಪ್ರತಿಭಟನೆ, ಚರ್ಚೆ ನಡೆಯುತ್ತಿರುವಾಗ ಮಾರಕಾಯುಧಗಳೊಂದಿಗೆ ಬಂದಿದ್ದ ಐವರು ಆರೋಪಿಗಳ ಪೈಕಿ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಒಂದು ಗುಂಪಿನ ವಿದ್ಯಾರ್ಥಿಗಳ ಪರವಾಗಿ 5-6 ವ್ಯಕ್ತಿಗಳು ಮಾರಕಾಯುಧಗಳೊಂದಿಗೆ ಆಗಮಿಸಿದ್ದರು. ಯಾವುದೇ ಸಮಯದಲ್ಲಾದರೂ, ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುವ ಮಾಹಿತಿ ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಗಂಗೊಳ್ಳಿಯ ಅಬ್ದುಲ್ ಮಜೀದ್ (32) ಹಾಗೂ ರಜಬ್ (41) ಎಂದು ಗುರುತಿಸಲಾಗಿದೆ. ಖಲೀಲ್, ರಿಜ್ವಾನ್ ಹಾಗೂ ಇಫ್ತೀಕರ್ ಎಂಬುವರ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಸದಾಶಿವ ಗವರೋಜಿ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನ ಬಂಧಿಸಿದೆ.

ಇದನ್ನೂ ಓದಿ:ನ್ಯಾಯಾಲಯ ತಡೆಯಾಜ್ಞೆ ಉಲ್ಲಂಘಿಸಿ ಪ್ರಾರ್ಥನಾ ಮಂದಿರದ ಕಾಂಪೌಂಡ್ ಗೋಡೆ ಹಾನಿ : ದೂರು ದಾಖಲು

ABOUT THE AUTHOR

...view details