ಕರ್ನಾಟಕ

karnataka

ETV Bharat / state

ಫೇಸ್‌ಬುಕ್​ನಲ್ಲಿ ಪತ್ನಿಗೆ ತಲಾಖ್ ಎಂದು ಪೋಸ್ಟ್​ ಹಾಕಿದ್ದ ಆರೋಪಿ ಬಂಧನ - Udupi Detention of accused News

ಸಾಮಾಜಿಕ ಜಾಲತಾಣ ಫೇಸ್‌ಬುಕ್​ನಲ್ಲಿ ಪತ್ನಿಯನ್ನುದ್ದೇಶಿಸಿ ಟ್ರಿಪಲ್ ತಲಾಖ್ ಎಂಬುದಾಗಿ ಪೋಸ್ಟ್​ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಫೇಸ್‌ಬುಕ್ ಪೋಫೈಲ್‌ ಮೂಲಕ ಪತ್ನಿಗೆ ಟ್ರಿಪಲ್ ತಲಾಖ್
ಫೇಸ್‌ಬುಕ್ ಪೋಫೈಲ್‌ ಮೂಲಕ ಪತ್ನಿಗೆ ಟ್ರಿಪಲ್ ತಲಾಖ್

By

Published : Aug 9, 2020, 8:34 AM IST

ಶಿರ್ವ(ಉಡುಪಿ): ಸಾಮಾಜಿಕ ಜಾಲತಾಣ ಫೇಸ್‌ಬುಕ್​‌ನಲ್ಲಿ ಪತ್ನಿಯನ್ನುದ್ದೇಶಿಸಿ ಟ್ರಿಪಲ್ ತಲಾಖ್ ಎಂದು ಪೋಸ್ಟ್​ ಹಾಕಿದ್ದ ​ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಶಿರ್ವದ ಶೇಕ್ ಮೊಹಮ್ಮದ್ ಸಲೀಂ (38) ಬಂಧಿತ ಆರೋಪಿ. ಈತ ಶಿರ್ವ ಜಾಮಿಯಾ ಮಸೀದಿ ಸಮೀಪದ ನಿವಾಸಿ. 2010ರ ಸೆ.23 ರಂದು ಶಿರ್ವದಲ್ಲಿ ವಿವಾಹವಾಗಿದ್ದು, ನಂತರ ಪತಿ ಮತ್ತು ಮಗಳ ಜೊತೆ ಸೌದಿ ಅರೇಬಿಯಾದ ದಮ್ಮಾಮ್​ನಲ್ಲಿ ವಾಸವಿದ್ದ.

ಆಗಸ್ಟ್ 3ರಂದು ಸಲೀಂ ತನ್ನ ಪತ್ನಿ ಹಾಗೂ ಮಗಳನ್ನು ದಮ್ಮಾಮ್‌ನಲ್ಲಿಯೇ ಬಿಟ್ಟು ಇನ್ನೊಂದು ಮಹಿಳೆಯೊಂದಿಗೆ ಮುಂಬೈಗೆ ಬಂದಿದ್ದ. ನಂತರ ತನ್ನ ಫೇಸ್‌ಬುಕ್​ ಖಾತೆಯಲ್ಲಿ ಪತ್ನಿಯನ್ನುದ್ದೇಶಿಸಿ ಟ್ರಿಪಲ್ ತಲಾಖ್ ಎಂಬುದಾಗಿ ಪೋಸ್ಟ್​ ಮಾಡಿರುವುದಾಗಿ ದಮ್ಮಾಮ್‌ನಲ್ಲಿರುವ ಪತ್ನಿ ಆನ್‌ಲೈನ್‌ನಲ್ಲಿ ಪತಿಯ ವಿರುದ್ಧ ದೂರು ನೀಡಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮುಂಬೈಯಿಂದ ಊರಿಗೆ ಬಂದಿದ್ದ ಆರೋಪಿ ಸಲೀಂನನ್ನು ಶಿರ್ವ ಪೊಲೀಸರು ಆಗಸ್ಟ್​ 7ರಂದು ಶಿರ್ವದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ಆಗಸ್ಟ್ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ABOUT THE AUTHOR

...view details